ದಾವಣಗೆರೆ: ಗಣೇಶ ಮೂರ್ತಿ ಪ್ರತಿಷ್ಠಾಪನೆಯ 5ನೇ ದಿನವಾದ ಭಾನುವಾರ ವಿಘ್ನನಿವಾರಕನನ್ನು ಜನರು ಭಕ್ತಿಯಿಂದ ವಿಸರ್ಜನೆ ಮಾಡಿದರು. ಮನೆ, ಸಾರ್ವಜನಿಕ ಸ್ಥಳ, ಸಂಘ–ಸಂಸ್ಥೆಗಳ ಕಚೇರಿಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ನೂರಾರು ಗಣಪಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿದಾಯ ಹೇಳಲಾಯಿತು.

ವಿಸರ್ಜನೆಗೂ ಮುನ್ನ ಭವ್ಯ ಮೆರವಣಿಗೆ ನಡೆಯಿತು. ಗಣೇಶ ಉತ್ಸವದ ಮೆರವಣಿಗೆಯಲ್ಲಿ ಡಿಜೆ ಬಳಕೆ ನಿಷೇಧ ಹೇರಿದ್ದರಿಂದ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯ ವೈಭವ ಇಮ್ಮಡಿಗೊಳಿಸಿದ್ದವು.

ಗಣೇಶ ಮೂರ್ತಿ ವಿಸರ್ಜನೆಗೆ ಮಹಾನಗರ ಪಾಲಿಕೆಯ ವತಿಯಿಂದ ಸಂಚಾರಿ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆ ನಗರದ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ನೀರಿನ ಟ್ಯಾಂಕರ್ಗಳನ್ನು ನಿಲುಗಡೆ ಮಾಡಲಾಗಿತ್ತು. ಮನೆಗಳಿಂದ ತಂದಿದ್ದ ಗಣೇಶ ಮೂರ್ತಿಗಳನ್ನು ಜನರು ವಿಸರ್ಜನೆ ಮಾಡಿದರು. ಇದಕ್ಕೂ ಮುನ್ನ ಏಕದಂತನಿಗೆ ಭಕ್ತಿಪೂರ್ವಕವಾಗಿ ನಮಿಸಿ, ಪೂಜೆ ಸಲ್ಲಿಸಿದರು.

ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಗಣಪತಿ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಏಕದಂತನ ಮೂರ್ತಿಯ ಜೊತೆಗೆ ಸ್ತಬ್ಧಚಿತ್ರಗಳ ಮೆರವಣಿಗೆ ಸಾಗಿದವು. ಶಿವ–ಪಾರ್ವತಿಯ ಜೊತೆಗೆ ಆಸೀನನಾಗಿದ್ದ ಗಣೇಶ ಮೂರ್ತಿ ವಿಶೇಷವಾಗಿತ್ತು. ರಾಮ–ಲಕ್ಷ್ಮಣ, ರಾಜಾವೀರ ಮದಕರಿ ನಾಯಕ, ಭಗೀರಥ ಮಹರ್ಷಿಯ ಮೆರವಣಿಗೆ ಗಮನ ಸೆಳೆಯಿತು.

ಶಾಮನೂರಿನ ವಿನಾಯಕ ಸ್ನೇಹ ಬಳಗದ ವತಿಯಿಂದ ಭಾನುವಾರ ಅದ್ದೂರಿ ಮೆರವಣಿಗೆ ನಡೆಯಿತು. ಚೆಂಡೆ, ಮೋಜಿನ ಗೊಂಬೆ ಕುಣಿತದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ರಸ್ತೆ ಬದಿಯಲ್ಲಿದ್ದ ನೂರಾರು ಜನರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಬಾತಿ ಕೆರೆ ಹಾಗೂ ಶಿರಮಗೊಂಡನಹಳ್ಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಹೊಂಡಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.