ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಎದುರಿಸಲು ಸಜ್ಜಾಗಿ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಉಸ್ತುವಾರಿ ನಿರ್ದೇಶಕ ಶ್ರೀಕಾಂತ್ ತ್ರಿಪಾಠಿ ಸಲಹೆ
Last Updated 9 ಫೆಬ್ರುವರಿ 2020, 10:31 IST
ಅಕ್ಷರ ಗಾತ್ರ

ದಾವಣಗೆರೆ: ‘ವಿಶ್ವದಲ್ಲಿ ಅನೇಕ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದ್ದು, ಅವುಗಳನ್ನು ಎದುರಿಸಲು ವೈದ್ಯ ವಿದ್ಯಾರ್ಥಿಗಳು ಸಜ್ಜಾಗಬೇಕಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಉಸ್ತುವಾರಿ ನಿರ್ದೇಶಕ ಶ್ರೀಕಾಂತ್ ತ್ರಿಪಾಠಿ ಸಲಹೆ ನೀಡಿದರು.

‘ಎಸ್‌.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಿಂದ ಶನಿವಾರ ಆಯೋಜಿಸಿದ್ದ 9ನೇ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ತಂತ್ರಜ್ಞಾನ ಮಾನವೀಯತೆ ಮೆರೆಸುತ್ತಿದ್ದು, ಈ ನಿಟ್ಟಿನಲ್ಲಿ ಮಾನವೀಯ ಸ್ಪರ್ಶ ನೀಡಬೇಕು’ ಎಂದರು.

1986ಲ್ಲಿ ಭಾರತದಲ್ಲಿ ಎಚ್‌ಐವಿ ಪತ್ತೆಯಾಯಿತು. ವಿದೇಶದಲ್ಲಿದ್ದ ಈ ರೋಗ ನಮ್ಮಲ್ಲಿಗೂ ಬರುತ್ತದೆ ಎಂಬ ಕಲ್ಪನೆ ಇರಲಿಲ್ಲ. ಆನಂತರ ದೊಡ್ಡ ಪ್ರಮಾಣದಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಯಿತು. ಈ ರೋಗಕ್ಕೆ ನಮ್ಮ ಬಳಿ ಚಿಕಿತ್ಸೆ ಇರಲಿಲ್ಲ.ಈ ರೋಗದ ವಿರುದ್ಧ ಹೋರಾಡಲು ಅನೇಕ ಕಂಪನಿಗಳು ಔಷಧವನ್ನು ಪತ್ತೆಹಚ್ಚಿವೆ’ ಎಂದರು.

‘ಎಚ್ಐವಿ ನಂತರ ಸಾರ್ಸ್ ರೋಗ ಕಾಣಿಸಿಕೊಂಡಿತು. ಈಗ ಕೊರೊನ ವೈರಸ್ ಕಾಣಿಸಿಕೊಂಡಿದೆ. ಇದು ಭಾರತಕ್ಕೆ ಕಾಲಿಟ್ಟರೆ ಇದಕ್ಕೆ ನಾವು ಸದಾ ಸಿದ್ಧವಾಗಿರಬೇಕಿದೆ. ಅದನ್ನು ಎದುರಿಸುವುದು ಹೇಗೆ ಆ ಬಗ್ಗೆ ಸಂಶೋಧನೆ ಕೈಗೊಳ್ಳಬೇಕು. ಮುಂದೆಯೂ ಹೊಸ ರೋಗಗಳು ಬರಬಹುದು. ಆದನ್ನು ಎದುರಿಸಲು ನಾವು ಸಿದ್ಧವಾಗಿರಬೇಕು. ವೈದ್ಯ ಆಜೀವ ವಿದ್ಯಾರ್ಥಿಯಂತೆ. ಕಲಿಯುವ ಬಯಕೆ ವೈದ್ಯರು ಅಳವಡಿಸಿಕೊಳ್ಳಬೇಕು’ ಎಂದರು.

ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದ್ದು, ಜಾಗತಿಕವಾಗಿ ಹೊಸ ಸಲಕರಣೆಗಳು ಬರುತ್ತಿವೆ. ಈ ನಿಟ್ಟಿನಲ್ಲಿ ವೈದ್ಯ ವಿದ್ಯಾರ್ಥಿಗಳು ದೊಡ್ಡ ಪಾತ್ರ ವಹಿಸಬೇಕಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್ ಸಲಹೆ ನೀಡಿದರು.

‘ಭಾರತ ಹಲವು ವಲಯಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು, 1950ರಲ್ಲಿ ಅಮೆರಿಕ ಹಾಗೂ ರಷ್ಯಾಗಳು ವ್ಯೂಹಾತ್ಮಕ ಸ್ಪರ್ಧೆ ನಡೆಸುತ್ತಿದ್ದವು. ಆಗ ವಿಕ್ರಮ್ ಸಾರಾಭಾಯಿ ಅವರು ಬಾಹ್ಯಾಕಾಶ ತಂತ್ರಜ್ಞಾನವನ್ನು ಭಾರತದ ಬೆಳವಣಿಗೆಗೆ ಬಳಸಲು ಬಯಸಿದ್ದರು’ ಎಂದು ಹೇಳಿದರು.

‘ಅಮೆರಿಕ ಹಾಗೂ ರಷ್ಯಾಗಳು 24ರಿಂದ 27 ಉಪಗ್ರಹಗಳಿಂದ ಮೊಬೈಲ್ ಜಿಪಿಎಸ್ ಬಳಸಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ನಾವು ಕೇವಲ 7 ಉಪಗ್ರಹಗಳ ಗುಚ್ಛದಿಂದ ‘ನಾವಿಕ್’ ತಂತ್ರಜ್ಞಾನ ರೂಪಿಸಿದ್ದೇವೆ. ಭಾರತದಲ್ಲಷ್ಟೇ ಅಲ್ಲದೇ ಅದರಾಚೆಗೂ 1500 ಕಿ.ಮೀ. ಜಿಪಿಎಸ್ ಒದಗಿಸುತ್ತಿದ್ದೇವೆ. ಇದು ಮೀನುಗಾರಿಗೆ ನೆರವಾಗುತ್ತಿದೆ’ ಎಂದರು.

‘ಉಪಗ್ರಹ ಆಧರಿತ ಉಪಕರಣಗಳು ಜೀವನದ ಎಲ್ಲ ಅಂಗಗಳ ಮೇಲೆ ಪರಿಣಾಮ ಬೀರುತ್ತಿದ್ದು, ನಾಗರಿಕರ ಜೀವನವನ್ನು ಉತ್ತಮ ಮಾಡುವ ವಲಯವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಆರೋಗ್ಯವಿದ್ದರೆ ಸಾಧನೆ ಸಾಧ್ಯ. ಇಲ್ಲಿ ನಿಮಗೆ ವಿಪುಲ ಅವಕಾಶ ಅವಕಾಶಗಳಿದ್ದು, ಭಾರತ ಈಗ ಆರ್ಥಿಕವಾಗಿ ನಂಬರ್ 1 ಸ್ಥಾನ ಪಡೆಯುವ ಅವಕಾಶಗಳೂ ಇದ್ದು, ವೈದ್ಯ ವಿದ್ಯಾರ್ಥಿಗಳು ವಿಭಿನ್ನವಾಗಿ ಕೆಲಸ ಮಾಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಸಮಾಜಕ್ಕೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.

ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ರವೀಂದ್ರ ಬಣಕರ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT