ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡರನಾಯ್ಕನಹಳ್ಳಿ: ಮುಸಿಯಾ ಹಾವಳಿ; ಮಕ್ಕಳ ಮೇಲೆ ದಾಳಿ

Published 24 ಫೆಬ್ರುವರಿ 2024, 13:21 IST
Last Updated 24 ಫೆಬ್ರುವರಿ 2024, 13:21 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಎಂಟು ದಿನಗಳಿಂದ ಮುಸಿಯಾ ಹಾವಳಿಯಿದ್ದು, ಶಾಲೆಗಳಿಗೆ ಮಕ್ಕಳನ್ನು ಕೇಳುಹಿಸುವುದೇ ಕಷ್ಟವಾಗಿದೆ ಎಂದು ಕಡರನಾಯ್ಕನಹಳ್ಳಿ ಗ್ರಾಮದ ನಾಗಪ್ಪ ಬಡಾವಣೆಯ ನಿವಾಸಿಗಳು ದೂರಿದ್ದಾರೆ.

ಡಾ.ವೈ.ನಾಗಪ್ಪ ಬಡಾವಣೆಯಲ್ಲಿ ಪ್ರೌಢಶಾಲೆ, ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಇವೆ. ಬಡಾವಣೆಯಲ್ಲಿ ಮುಷಿಯಾ ಉಪಟಳ ಹೆಚ್ಚಾಗಿದೆ. ಮಕ್ಕಳನ್ನು ಬೆನ್ನತ್ತಿ ಹೋಗುತ್ತಿದ್ದು, ಭೀತಿ ಮೂಡಿಸಿದೆ. 

ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬರಿಗೆ ಮುಸಿಯಾ ಕಚ್ಚಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂಗನವಾಡಿ ಮಕ್ಕಳು ಶನಿವಾರ ಮನೆಗೆ ತೆರಳುವಾಗಲೂ ದಾಳಿ ಮಾಡಿದೆ. ಸ್ಥಳಿಯರು ಅದನ್ನು ಓಡಿಸಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ನಿವಾಸಿಗಳು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರಾದ ಶರಣಪ್ಪ, ತಿಪ್ಪೇಶ್ ಹಾಗೂ ನಿವಾಸಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT