ದಾವಣಗೆರೆಯ ಎಸ್.ಎಸ್.ಬಡಾವಣೆಯ ‘ಎ’ ಬ್ಲಾಕ್‌ನಲ್ಲಿ ರಸ್ತೆ ಹಾಗೂ ಕಟ್ಟಡ ಜಲಾವೃತವಾಗಿತ್ತು
ದಾವಣಗೆರೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ್ದ ಕ್ಷಣ
ದಾವಣಗೆರೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟ ಘಟನೆ ಬಳಿಕ ಅರಳಿಮರ ವೃತ್ತದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು
‘ಲಾಕಪ್‌ಡೆತ್’; ಪೊಲೀಸ್ ಠಾಣೆ ಮೇಲೆ ದಾಳಿ
ಮಟ್ಕಾ ಜೂಜು ಆಡಿಸುತ್ತಿದ್ದ ಆರೋಪದ ಮೇರೆಗೆ ಜಿಲ್ಲೆಯ ಚನ್ನಗಿರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭದಲ್ಲೇ ಸ್ಥಳೀಯ ನಿವಾಸಿ ಆದಿಲ್ ಖಲಿಂ ಉಲ್ಲಾ (32) ಮೃತಪಟ್ಟಿದ್ದರು. ಅವರದ್ದು ‘ಲಾಕಪ್ ಡೆತ್’ ಎಂದು ಆರೋಪಿಸಿ ಮೃತನ ಕುಟುಂಬ ಸದಸ್ಯರು ಸಂಬಂಧಿಕರು ಹಾಗೂ ನೆರೆಹೊರೆಯವರು ಮೇ 25ರಂದು ತಡರಾತ್ರಿ ಪೊಲೀಸ್ ಠಾಣೆ ಎದುರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಉದ್ರಿಕ್ತರ ಗುಂಪು ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ ಠಾಣೆ ಎದುರು ನಿಲ್ಲಿಸಿದ್ದ 5 ಪೊಲೀಸ್ ವಾಹನಗಳನ್ನು ಜಖಂಗೊಳಿಸಿತ್ತು. ಕಿಡಿಗೇಡಿಗಳಿಂದ ಕಲ್ಲು ತೂರಾಟ ದಾವಣಗೆರೆಯ ಬೇತೂರು ರಸ್ತೆಯಲ್ಲಿನ ಅರಳಿಮರ ವೃತ್ತದಲ್ಲಿ ಸೆಪ್ಟೆಂಬರ್ 19ರಂದು ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದವು. ಸಮೀಪದ ಆನೆಕೊಂಡ ಮಟ್ಟಿಕಲ್ಲು ಬಡಾವಣೆಗಳಿಗೂ ನುಗ್ಗಿದ್ದ ಪುಂಡರು ವಾಹನಗಳು ಮನೆಯ ಕಿಟಕಿಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದರು. ಪೊಲೀಸರು ರಾತ್ರೋರಾತ್ರಿ ಮನೆಗಳಿಗೆ ನುಗ್ಗಿ ಆರೋಪಿಗಳನ್ನು ಬಂಧಿಸಿ ಗಲಭೆಯನ್ನು ನಿಯಂತ್ರಿಸಿದ್ದರು. ಅತಿ ದೊಡ್ಡ ದರೋಡೆ ಪ್ರಕರಣ ಅಕ್ಟೋಬರ್ 28ರಂದು ನ್ಯಾಮತಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯ ಕಿಟಕಿ ಮುರಿದು ಒಳನುಗ್ಗಿದ್ದ ಕಳ್ಳರು 17 ಕೆ.ಜಿ. ಚಿನ್ನಾಭರಣ ದೋಚಿದ್ದರು. ಜಿಲ್ಲೆಯಲ್ಲಿ ನಡೆದ ಅತಿ ದೊಡ್ಡ ದರೋಡೆ ಪ್ರಕರಣ ಇದಾಗಿದೆ. 509 ಗ್ರಾಹಕರು ಸಾಲ ಪಡೆಯಲು ಅಡವಿಟ್ಟಿದ್ದ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದರು. ಈ ಪ್ರಕರಣವನ್ನು ಈವರೆಗೂ ಬೇಧಿಸಲು ಆಗಿಲ್ಲ.
ಅಗಲಿದ ಗಣ್ಯರು
ಎಂ.ಜಿ. ಈಶ್ವರಪ್ಪ ಶಿಕ್ಷಣ ತಜ್ಞ ಜಾನಪದ ವಿದ್ವಾಂಸ ಇಲ್ಲಿನ ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾಗಿದ್ದ ಎಂ.ಜಿ. ಈಶ್ವರಪ್ಪ (74) ಅವರು ಜೂನ್ 1ರಂದು ನಿಧನರಾಗಿದ್ದರು. ಶ್ವಾಸಕೋಶದ ಸೋಂಕಿನಿಂದ ಅವರು ಬಳಲುತ್ತಿದ್ದರು. ರಂಗಭೂಮಿ ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಮಧ್ಯ ಕರ್ನಾಟಕ ಭಾಗದಲ್ಲಿ ‘ಮೇಷ್ಟ್ರು’ ಎಂದೇ ಹೆಸರಾಗಿದ್ದರು. ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ಸರ್ಕಾರ ಅವರಿಗೆ 2020ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನಾಗಮ್ಮ ಕೇಶವಮೂರ್ತಿ ದಾವಣಗೆರೆಯ ‘ಮದರ್ ಥೆರೇಸಾ’ ಎಂದೇ ಹೆಸರಾಗಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ (90) ಮಾರ್ಚ್ 16ರಂದು ನಿಧನರಾಗಿದ್ದರು. ದಾವಣಗೆರೆ ಹಾಗೂ ಮಾಯಕೊಂಡ ಕ್ಷೇತ್ರದಿಂದ 3 ಬಾರಿ ಶಾಸಕಿಯಾಗಿದ್ದ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವೆಯಾಗಿದ್ದರು. ಶಿಕ್ಷಣ ಸಚಿವೆಯಾಗಿ 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯ ಮಾಡಿದ್ದರು. ಗೌಡ್ರ ಚನ್ನಬಸಪ್ಪ ನಗರ ದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿ ಕಳಸಪ್ಪನವರ ಗೌಡ್ರ ಚನ್ನಬಸಪ್ಪ (76) ಅವರು ಅಕ್ಟೋಬರ್ 20ರಂದು ನಿಧನರಾಗಿದ್ದರು. ಕುರುಬ ಸಮಾಜದ ಮುಖಂಡರಾಗಿದ್ದ ಗೌಡ್ರ ಚನ್ನಬಸಪ್ಪ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಸಹ ಆಗಿದ್ದರು.