ಹೊನ್ನಾಳಿ: ಒಳ ಮೀಸಲಾತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಕ್ರಾಂತಿ ರಥಯಾತ್ರೆ ಮೇ 19ರಂದು ಹೊನ್ನಾಳಿಯಲ್ಲಿ ಸಂಚರಿಸಲಿದೆ ಎಂದು ಮಾದಿಗ ದಂಡೋರ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ದಿಡಗೂರು ತಮ್ಮಣ್ಣ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೆಳಿಗ್ಗೆ ದೇವನಾಯಕನಹಳ್ಳಿಯ ಕನಕದಾಸ ವೃತ್ತದಿಂದ ಯಾತ್ರೆ ಹೊರಡಲಿದೆ. ಬೈಕ್ ರ್ಯಾಲಿಯು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಲಿದೆ. ಅಲ್ಲಿ ಮುಖಂಡ ಭಾಸ್ಕರ್ ರಾವ್ ಮಾತನಾಡಲಿದ್ದಾರೆ ಎಂದು ಹೇಳಿದರು.

ನಂತರ ಕ್ರಾಂತಿ ರಥಯಾತ್ರೆಯು ನ್ಯಾಮತಿ ತಾಲ್ಲೂಕಿಗೆ ತೆರಳಲಿದೆ. ಅಲ್ಲಿಂದ ಸುರಹೊನ್ನೆ, ಬೆಳಗುತ್ತಿ, ಮಲ್ಲಿಗೇನಹಳ್ಳಿ, ಕೆಂಚಿಕೊಪ್ಪ, ಸೊರಟೂರು, ಹೊನ್ನಾಳಿ, ಸಾಸ್ವೇಹಳ್ಳಿಗೆ ತೆರಳಿ ಅಲ್ಲಿಂದ ಚನ್ನಗಿರಿ ತಾಲ್ಲೂಕಿಗೆ ಬೀಳ್ಕೊಡಲಾಗುವುದು ಎಂದರು.

ಮುಖಂಡರಾದ ಕೆಂಗಲಹಳ್ಳಿ ಪ್ರಭಾಕರ್, ತ್ಯಾಗದಕಟ್ಟೆ ಹನುಮಂತಪ್ಪ, ಕುರುವ ಮಂಜುನಾಥ್, ರಾಜು, ಮಾರಿಕೊಪ್ಪ ಮಂಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.