ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕಾರಿಡಾರ್‌: ರೈತರ ಪ್ರತಿಭಟನೆ

Last Updated 27 ನವೆಂಬರ್ 2022, 2:37 IST
ಅಕ್ಷರ ಗಾತ್ರ

ದಾವಣಗೆರೆ: ಕೈಗಾರಿಕಾ ಕಾರಿಡಾರ್‌ಗೆ ಶೇ 80ರಷ್ಟು ರೈತರು ಭೂಮಿ ನೀಡಲು ಒಪ್ಪಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ನೀಡಿರುವ ಹೇಳಿಕೆಯನ್ನು ಖಂಡಿಸಿ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರದ ರೈತರು ಶನಿವಾರ ಜಿಎಂಐಟಿ ಬಳಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಮನವಿ ಸಲ್ಲಿಸಿದರು.

ಕೈಗಾರಿಕಾ ಕಾರಿಡಾರ್‌ಗೆ 1156 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದರಲ್ಲಿ 800 ಎಕರೆಗೂ ಅಧಿಕ ಭೂಮಿ ಹೊಂದಿರುವ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಶೇ 80ರಷ್ಟು ರೈತರು ಒಪ್ಪಿದ್ದಾರೆ ಎಂದು ಯಾವ ಆಧಾರದಲ್ಲಿ ಸಂಸದರು ಹೇಳಿದ್ದಾರೆ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.

ಫಲವತ್ತಾದ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಒಂದು ಮಳೆ ಬಂದರೆ ಎಕರೆಗೆ 15 ಕ್ವಿಂಟಲ್ ಬಿಳಿಜೋಳ ಬೆಳೆಯುವ ಪ್ರದೇಶ ನಮ್ಮದು. ಬರಡು ಭೂಮಿಯಲ್ಲಿ ಅವರು ಕಾರಿಡಾರ್‌ ಮಾಡಲಿ.ಫಲವತ್ತಾದ ಭೂಮಿ ಪಡೆದು ರೈತರನ್ನು ಬೀದಿ ಪಾಲು ಮಾಡುವುದು ಬೇಡ ಎಂದು ಆಗ್ರಹಿಸಿದರು

ಭೂಮಿ ನೀಡದ ರೈತರಿಂದ ಭೂಮಿ ಪಡೆಯುವುದಿಲ್ಲ ಎಂದು ಸಂಸದರು ಹೇಳಿದಾಗ ನಮಗೆ ಖುಷಿಯಾಗಿತ್ತು. ರೈತರು ಒಪ್ಪಿದ್ದಾರೆ ಎಂದು ಈಗ ನೀಡಿರುವ ಹೇಳಿಕೆ ಆಘಾತವನ್ನುಂಟು ಮಾಡಿದೆ. ಜನಪರ ಎಂದು ತಿಳಿದುಕೊಂಡಿರುವ ಸಂಸದರು ಜನವಿರೋಧಿ ಆಗಬಾರದು. ಮುಖ್ಯಮಂತ್ರಿ ಗಮನ ಹರಿಸಬೇಕು. ನಮ್ಮ ಶಾಸಕ ಪ್ರೊ. ಲಿಂಗಣ್ಣ ರೈತರ ಪರ ಒಲವು ತೋರಬೇಕು ಎಂದು ಒತ್ತಾಯಿಸಿದರು.

ನಮ್ಮ ದಾಖಲೆಗಳನ್ನು ಲಾಕ್‌ ಮಾಡಿದ್ದಾರೆ. ಹಾಗಾಗಿ ನಾವು ಬ್ಯಾಂಕಿಗೆ ಹೋದರೆ ಸಾಲು ಸಿಗುತ್ತಿಲ್ಲ. ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ ಕೆಲಸ ಆಗುತ್ತಿಲ್ಲ ಎಂದು ಅಲವತ್ತುಕೊಂಡರು.

ಪ್ರತಿಭಟನೆಯಲ್ಲಿ ಡಿ.ಟಿ. ಹನುಮಂತಪ್ಪ, ಕೆ.ಟಿ. ಕುಮಾರ್‌, ಪ್ರದೀಪ್‌, ನವೀನ್‌, ಚಂದ್ರಪ್ಪ, ಶಂಕರ್‌, ನವೀನಾ, ಉಮಾ, ಅಂಬುಜಾ, ವಿಜಯಮ್ಮ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT