ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಒತ್ತಾಯ

Last Updated 5 ಸೆಪ್ಟೆಂಬರ್ 2020, 14:04 IST
ಅಕ್ಷರ ಗಾತ್ರ

ದಾವಣಗೆರೆ: ರೈತರ, ಕಾರ್ಮಿಕರ ಮತ್ತು ಕೃಷಿ ಕೂಲಿಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್,ಕರ್ನಾಟಕ ಪ್ರಾಂತ ರೈತ ಸಂಘ,ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ತಾಲ್ಲೂಕು ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.

ಮೂರು ದಶಕಗಳಿಂದ ದೇಶದಲ್ಲಿ ಜಾರಿಯಾಗುತ್ತಿರುವ ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣ ನೀತಿಗಳಿಂದ ಶ್ರಮ ಜೀವಿಗಳು ಬಲಿಪಶುಗಳಾಗಿದ್ದಾರೆ.ಕೋವಿಡ್ ಕಾಲದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕರು, ರೈತರು ಹಾಗೂ ಕೂಲಿಕಾರರ ಬದುಕಿನ ಮೇಲೆ ದಾಳಿ ಮಾಡಿವೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಪ್ರತಿಯೊಬ್ಬರನ್ನೂ ಉಚಿತವಾಗಿ ಕೋವಿಡ್ ಪರೀಕ್ಷೆಗೊಳಪಡಿಸಿ ಔಷಧೋಪಚಾರ ಒದಗಿಸಬೇಕು.ಪ್ರತಿಯೊಬ್ಬರಿಗೂ ಮುಂದಿನ ಆರು ತಿಂಗಳವರೆಗೆ ತಿಂಗಳಿಗೆ ₹ 7, 500 ಪರಿಹಾರ ನೀಡಬೇಕು.ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ 10 ಕೆ.ಜಿ. ಉಚಿತ ಆಹಾರಧಾನ್ಯ ವಿತರಿಸಬೇಕು.ಉದ್ಯೋಗ ಖಾತ್ರಿ ವೇತನವನ್ನು ಕನಿಷ್ಠ ₹ 600 ಕ್ಕೆ ಹೆಚ್ಚಿಸಬೇಕು. ಅದನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಕನಿಷ್ಠ 200 ದಿನಗಳ ಕೂಲಿ ನೀಡಬೇಕು.ಶಿಕ್ಷಣ, ಆರೋಗ್ಯ, ರೈಲು, ರಸ್ತೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ತಡೆಯಬೇಕು. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದಆನಂದರಾಜು ಕೆ.ಎಚ್., ಗುಡ್ಡಪ್ಪ ಎ., ಹೊನ್ನೂರು ತಿಮ್ಮಣ್ಣ, ಹನುಮಂತನಾಯ್ಕ, ಹಾಲೇಶನಾಯ್ಕ, ಸುರೇಶ್ ಬಾಡ, ಸದಾಶಿವನಾಯ್ಕ, ಚಿನ್ನಸಮುದ್ರ ಜಯಣ್ಣ, ಇ. ಶ್ರೀನಿವಾಸ್, ವೆಂಕಟೇಶ್ ಎ., ಗುಡಾಳ್ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT