ತೀರ್ಥಹಳ್ಳಿ: ತಾಲ್ಲೂಕಿನ ಆರಗ ಸಮೀಪದ ಕುಣಿಗದ್ದೆ ಸೇತುವೆ ಬಿರುಕು ಬಿಟ್ಟಿದ್ದು, ಅಪಾಯದ ಸ್ಥಿತಿ ತಲುಪಿದೆ. ಆಕಸ್ಮಿಕವಾಗಿ ಸೇತುವೆಗೆ ಹಾನಿಯಾದರೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳಲಿದೆ.

ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿಟ್ಲಗೋಡು ಗ್ರಾಮದ ಕುಣಿಗದ್ದೆ ಸೇತುವೆ ಜಿಲ್ಲಾ ಪಂಚಾಯಿತಿ ರಸ್ತೆ ವ್ಯಾಪ್ತಿಗೆ ಸೇರಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಸೇತುವೆಯ ಕುಂದಕ್ಕೆ ತೀವ್ರ ಹಾನಿಯಾಗಿದ್ದು, ಸೇತುವೆ ಮೇಲ್ಭಾಗ ಬಿರುಕು ಬಿಟ್ಟಿದೆ. ಕೈಪಿಡಿಗಳು ತುಂಡಾಗಿದ್ದು ತೀರಾ ಅಪಾಯದ ಸ್ಥಿತಿಗೆ ತಲುಪಿದೆ.

ಗೋಪಿನಾಥ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕುಣಿಗದ್ದೆ ಸೇತುವೆಯು ‘ಚಿಕ್ಕ ತಿರುಪತಿ’ ಎಂದು ಪ್ರಸಿದ್ಧವಾಗಿರುವ ಹಣ್ಣೆಗಿರಿ ಅಥವಾ ಅರುಣಗಿರಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಸಂಪರ್ಕವನ್ನು ಕಲ್ಪಿಸಿದೆ. ಜೊತೆಗೆ ದಾಸನಗದ್ದೆ, ತಾರೆಕೊಡಿಗೆ, ಜಿಟ್ಟೆಕೊಪ್ಪ, ಅರುಣಗಿರಿ, ಮಿಟ್ಲಗೋಡು ಸುತ್ತಮುತ್ತಲ ಗ್ರಾಮಗಳಿಗೆ ಆಧಾರವಾಗಿದೆ.

ಮಳೆಗಾಲದ ವೇಳೆ ಗೋಪಿನಾಥ ಹಳ್ಳವು ಸುತ್ತಮುತ್ತಲ ಗಿಡ, ಗಂಟಿ, ಬಿದಿರುಗಳನ್ನು ಹೊತ್ತು ವೇಗವಾಗಿ ಹರಿಯುತ್ತದೆ. 2024ರ ಆಗಸ್ಟ್ ತಿಂಗಳಿನಲ್ಲಿ ಬೃಹತ್ ಬಿದಿರಿನ ಹಿಂಡು ಜೋರಾಗಿ ಹಳ್ಳದಲ್ಲಿ ಹರಿದಿತ್ತು. ಇದರಿಂದ ಸೇತುವೆಗೆ ತೀವ್ರ ಹಾನಿಯಾಗಿತ್ತು. ಹಳ್ಳದಲ್ಲಿರುವ ಕುಂದದಲ್ಲಿ ಬಿರುಕು ಮೂಡಿದ್ದು, ಯಾವ ಸಂದರ್ಭದಲ್ಲಾದರೂ ಸೇತುವೆ ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ನಿರ್ವಹಣೆ, ಎಚ್ಚರಿಕೆ ಫಲಕವಿಲ್ಲ:

ಅರುಣಗಿರಿಯಲ್ಲಿ ನಡೆಯುವ ಅಕ್ಷಯ ತೃತೀಯ, ರಥೋತ್ಸವ, ವೈಕುಂಠ ಏಕಾದಶಿ, ಶ್ರಾವಣ ಶನಿವಾರ, ಜಾತ್ರೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ದಿನ ಸಾವಿರಾರು ಭಕ್ತರು ಕುಣಿಗದ್ದೆ ಸೇತುವೆ ಮಾರ್ಗ ಬಳಸುತ್ತಾರೆ. ರಸ್ತೆಯ ಸಂಪರ್ಕ ಕಡಿತಗೊಂಡರೆ ಆರಗದಿಂದ ತೀರ್ಥಹಳ್ಳಿ ಮೂಲಕ ಸುತ್ತುವರಿದು ಗ್ರಾಮಗಳನ್ನು ಸಂಪರ್ಕಿಸಬೇಕು. ಸೇತುವೆಯ ಕೈಪಿಡಿಗಳು ತುಕ್ಕು ಹಿಡಿದು ಉದುರುತ್ತಿದರೂ, ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಸೇತುವೆಯ ಅಕ್ಕಪಕ್ಕದಲ್ಲಿ ಎಚ್ಚರಿಕೆ ಫಲಕ ಕೂಡ ಅಳವಡಿಸಿಲ್ಲ. ಮಳೆಗಾಲ ಆರಂಭವಾಗಿದ್ದು ಜೀವ ಕೈಯಲ್ಲಿ ಹಿಡಿದು ಸೇತುವೆ ದಾಟುವ ಪರಿಸ್ಥಿತಿ ಎದುರಾಗಿದೆ.

ಸೇತುವೆ ಮೇಲೆ ಸಂಚರಿಸುವುದಕ್ಕೆ ಭಯವಾಗುತ್ತಿದೆ. ಅಪಾಯ ಸಂಭವಿಸುವ ಮುನ್ನವೇ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು
ಮಂಜುನಾಥ ಕೆ.ಇ. ಮಿಟ್ಲಗೋಡು ನಿವಾಸಿ

ಸರ್ಕಾರದಿಂದ ಹೊಸ ಸೇತುವೆ ಮಂಜೂರಾಗಿದೆ. ನವೆಂಬರ್ ನಂತರ ಕಾಮಗಾರಿ ನಡೆಯಲಿದೆ
ಪ್ರಮೋದ್ ಡಿ. ಎಇಇ ಕರ್ನಾಟಕ ಭೂ ಸೇನಾ ನಿಗಮ (ಕೆಆರ್ಐಡಿಎಲ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.