ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಘವೇಂದ್ರರನ್ನು ಗೆಲ್ಲಿಸುವಂತೆ ಶಾಮನೂರು ಹೇಳಿಕೆ: ಒಳ್ಳೆಯ ಬೆಳವಣಿಗೆ –ಶೆಟ್ಟರ್

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ದಾವಣಗೆರೆ: ಶಿವಮೊಗ್ಗದ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಮತ್ತೆ ಗೆಲ್ಲಿಸುವಂತೆ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿರುವುದು ಉತ್ತಮ ಬೆಳವಣಿಗೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅಭಿಪ್ರಾಯಪಟ್ಟರು.

‘ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿಯವರು ಗೆಲ್ಲಲಿ ಎಂದು ಹಾರೈಸಿರುವುದು ಒಳ್ಳೆಯದೇ ಆಯಿತು. ನಾನು ಕೆಲವು ಘಟನೆಗಳಿಂದ ಬೇಸರಗೊಂಡು ಹಿಂದೆ ಬಿಜೆಪಿ ತೊರೆದಿದ್ದೆ. ಕಾಂಗ್ರೆಸ್‌ಗೆ ಸೇರಿದಾಗ ಆಗಲಿ, ಹೊರಬಂದಿರುವುದರಿಂದ ಯಾವುದೇ ಪಾಪಪ್ರಜ್ಞೆಯಾಗಲೀ ಅಥವಾ ಪಶ್ಚಾತ್ತಾಪವಾಗಲೀ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT