ಬುಧವಾರ, ಜೂನ್ 23, 2021
30 °C

ಮಾಗಾನಹಳ್ಳಿಯಲ್ಲೊಂದು ಮುತ್ತಿಕ್ಕುವ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸಾಮಾನ್ಯವಾಗಿ ಊರ ದೇವತೆಗೆಳು ಕುರಿ, ಕೋಳಿ, ಕೋಣ ಬಲಿ ಕೇಳೋದು ವಾಡಿಕೆ. ಆದ್ರೆ ಇಲ್ಲೊಂದು ಗ್ರಾಮದೇವತೆಗೆ ಮಾದಕ ನೃತ್ಯವೇ ನೈವೇದ್ಯ, ‌ಬೈಗುಳವೇ ಮಂತ್ರ, ಚುಂಬನವೇ ಪ್ರಸಾದ.

ತಾಲೂಕಿನ ಮಾಗಾನಹಳ್ಳಿಯಲ್ಲಿ ಇಂತಹ ಸಂಪ್ರದಾಯವಿದೆ. ಗ್ರಾಮದ ಊರಮ್ಮದೇವಿ ಜಾತ್ರೆಯಲ್ಲಿ ಮುತ್ತಿಕ್ಕುವ ಅನಿಷ್ಟ ಸಂಪ್ರದಾಯವಿದ್ದು, ಅನೇಕ ವರ್ಷಗಳಿಂದ ಜೀವಂತವಿದೆ.

ಪ್ರತಿ ಹತ್ತು ವರ್ಷಕೊಮ್ಮೆ ನಡೆಯುವ ಊರಮ್ಮ ದೇವಿ ಜಾತ್ರೆ ಮಹೋತ್ಸವದಲ್ಲಿ ಮಕ್ಕಳು, ವಯಸ್ಕರು ಹಾಗೂ ವೃದ್ಧ ಜೋಡಿ ನೃತ್ಯ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಊರ ಗೌಡ ಹಾಗೂ ಗ್ರಾಮದ ಶೋಷಿತ ಸಮಾಜದ ಮಹಿಳೆ ಸೇರಿ ನೃತ್ಯ ಮಾಡುತ್ತಾರೆ. ಇದಕ್ಕೆ ಜಾನಪದಿಯ ಭಾಷೆಯಲ್ಲಿ ‘ಆಶಾದಿ’ ಎಂದು ಕರೆಯುತ್ತಾರೆ.

ಇದಲ್ಲದೇ ಇನ್ನೊಂದು ಸಂಪ್ರದಾಯವಿದ್ದು, ಗ್ರಾಮದ ಶೋಷಿತ ಸಮಾಜದ ಮಹಿಳೆಯರು ಗ್ರಾಮದ ಕೆಲವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಜೊತೆಗೆ ಊರಮ್ಮನಿಗೂ ಬೈಯುವುದು ಇಲ್ಲಿನ ಸಂಪ್ರದಾಯ. ಹೀಗೆ ಬೈಸಿಕೊಂಡರೇ ಊರಮ್ಮ ಬಡವರ ಸಂಕಷ್ಟಕ್ಕೆ ಸ್ಪಂದಿಸುತ್ತಾಳೆ ಎಂಬುದು ಸಂಪ್ರದಾಯ. ಆದ್ರೆ ಆಶಾದಿ ಸಂಪ್ರದಾಯ ಮಾತ್ರ ವಿಚಿತ್ರವಾಗಿದೆ ಎಂದು ಗ್ರಾಮದ ಮುಖಂಡ ಪರುಶುರಾಮ ಹೇಳುತ್ತಾರೆ.

‘ಜಾತ್ರೆ ಶಾಂತಿಯುತವಾಗಿ ನಡೆದಿದ್ದು, ಶೇ 99ರಷ್ಟು ಹಿಂದುಳಿದ ಜನಾಂಗವಿದ್ದು, ಶೇ 1ರಷ್ಟು ಮುಂದುವರೆದ ಜನಾಂಗ ಇದೆ. ಪ್ರತಿ ಜಾತ್ರೆಯಲ್ಲೂ ಮುತ್ತಿಕ್ಕುವುದು ಅಲ್ಲದೇ ಬಯ್ಯವ ಸಂಪ್ರದಾಯವಿದೆ. ಅನಿಷ್ಟ ಪದ್ಧತಿಯ ಜೊತೆಗೆ ಸಂಪ್ರದಾಯ ಮುಖ್ಯ ಅಲ್ಲವೇ’ ಎನ್ನುತ್ತಾರೆ ಗ್ರಾಮದ ಮಂಜು.

‘ಜಾತ್ರೆ ನಡೆಯುವ 9 ದಿನ ಮೊದಲು ಊರಿನ ಸುತ್ತ  ಬೇಲಿ ಹಾಕುತ್ತೇವೆ. ಚರ್ಮದ ಪಾದರಕ್ಷೆ ಹಾಕಿ ಓಡಾಡುವ ಆಗಿಲ್ಲ. ಊರಿನಲ್ಲಿ ಚರಗ ಆದ ಮೇಲೆ ಹೊರಗೆ ಬರಬೇಕು’ ಎನ್ನುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.