ಜಗಳೂರು: ನದಿ ಮೂಲಗಳಿಲ್ಲದೆ ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿರುವ ತಾಲ್ಲೂಕಿನಲ್ಲಿ ಶ್ರೀಗಂಧ ಬೆಳೆಯತ್ತ ರೈತರ ಚಿತ್ತ ಹರಿದಿದೆ.

ಅತ್ಯಂತ ಕಡಿಮೆ ನೀರು ಬೇಡುವ ಹಾಗೂ ಭವಿಷ್ಯದಲ್ಲಿ ಕೋಟಿಗಟ್ಟಲೆ ಲಾಭದ ನಿರೀಕ್ಷೆಯಲ್ಲಿ ಬಯಲುಸೀಮೆಯ ರೈತರು ಶ್ರೀಗಂಧ ಬೆಳೆಯತ್ತ ಮುಖಮಾಡಿದ್ದಾರೆ.

ಪರಾವಾಲಂಬಿ ಸಸ್ಯವಾಗಿರುವ ಶ್ರೀಗಂಧವನ್ನು ಉಳಿದ ಬೆಳೆಗಳ ಮಧ್ಯೆ ಬೆಳೆಸಲಾಗುತ್ತದೆ. ರಸಗೊಬ್ಬರ, ಕೀಟನಾಶಕ ಮುಂತಾದ ಯಾವುದೇ ಹೆಚ್ಚುವರಿ ಖರ್ಚುಗಳಿಲ್ಲದೆ ಶ್ರೀಗಂಧ ಬೆಳೆಯಬಹುದು ಎಂಬುದು ರೈತರ ಲೆಕ್ಕಾಚಾರವಾಗಿದೆ.

ತಾಲ್ಲೂಕಿನ ಹುಚ್ಚವ್ವನಹಳ್ಳಿ ಕೊರಚರಹಟ್ಟಿ, ಹಿರೇಮಲ್ಲನಹೊಳೆ, ಬಸವನಕೋಟೆ, ಬಂಗಾರಕ್ಕನಗುಡ್ಡ, ದೊಣೆಹಳ್ಳಿ, ಶೆಟ್ಟಿಗೊಂಡನಹಳ್ಳಿ ಹಾಗೂ ಮುಸ್ಟೂರು ಸೇರಿ ತಾಲ್ಲೂಕಿನ ವಿವಿಧೆಡೆ 100ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಶ್ರೀಗಂಧ ಬೆಳೆಯಲಾಗುತ್ತಿದೆ. ಈ ಹಿಂದೆ ಕೃಷಿಭೂಮಿಯಲ್ಲಿ ಶ್ರೀಗಂಧ ಬೆಳೆಯಲು ಅವಕಾಶವಿರಲಿಲ್ಲ. ಈಚೆಗೆ ಸರ್ಕಾರವೇ ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದು, ರೈತರ ಉತ್ಸಾಹ ಇಮ್ಮಡಿಯಾಗಿದೆ.

14ರಿಂದ 16 ವರ್ಷದ ವೇಳೆಗೆ ಕಟಾವಿಗೆ ಸಿದ್ಧವಾಗುವ ಶ್ರೀಗಂಧಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಬಿಸಿಲನಾಡಿನ ಬಯಲು
ಸೀಮೆಯ ಹವಾಗುಣದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಇಲ್ಲಿನ ಶುಷ್ಕ ವಾತಾವರಣ ಗುಣಮಟ್ಟದ ಶ್ರೀಗಂಧಕ್ಕೆ ಪೂರಕವಾಗಿದೆ ಎನ್ನುತ್ತಾರೆ ಶ್ರೀಗಂಧ ಬೆಳೆದ ರೈತರು.

ಈ ಹಿನ್ನೆಲೆಯಲ್ಲಿ ಮೈಸೂರ್ ಸ್ಯಾಂಡಲ್ ಸೋಪ್ ಕಂಪನಿ (ಕೆಎಸ್ಡಿಎಲ್) ನೇರವಾಗಿ ರೈತರಿಗೆ ಸಸಿ ವಿತರಿಸಿ, ನಂತರ ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ತಾಲ್ಲೂಕಿನಲ್ಲಿ ಈಗಾಗಲೇ ಹತ್ತಾರು ಬೆಳೆಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

‘ಶ್ರೀಗಂಧ ಪರಾವಲಂಬಿ ಸಸ್ಯವಾಗಿದ್ದು ಪೇರಲಾ, ದಾಳಿಂಬೆ, ಮಾವು, ಹಲಸು, ನೇರಳೆ, ನುಗ್ಗೆ, ಅಗಸೆ ಮತ್ತು ಹುಣಸೆ ಬೆಳೆಗಳ ಮಧ್ಯೆ ಸುಲಭವಾಗಿ ಬೆಳೆಯುತ್ತದೆ. ಆರಂಭದಲ್ಲಿ ಎರಡು ವರ್ಷ ನೀರು ಕೊಟ್ಟರೆ ಸಾಕು. ಉಳಿದಂತೆ ಮಳೆ ಆಶ್ರಯದಲ್ಲೇ ಸಮೃದ್ಧವಾಗಿ ಬೆಳೆಯಲಿದೆ’ ಎಂದು ತಾಲ್ಲೂಕಿನ ಹುಚ್ಚವ್ವನಹಳ್ಳಿ ಕೊರಚರಹಟ್ಟಿ ಗ್ರಾಮದಲ್ಲಿ 10 ಎಕರೆ ಪ್ರದೇಶದಲ್ಲಿ ಶ್ರೀಗಂಧ ಬೆಳೆದಿರುವ ರೈತ ಮುನಿಸ್ವಾಮಿ ಹಾಗೂ ಬಂಗಾರಕ್ಕನಗುಡ್ಡ ಗ್ರಾಮದಲ್ಲಿ 8 ಎಕರೆಯಲ್ಲಿ ಶ್ರೀಗಂಧ ಬೆಳೆದಿರುವ ದೊಡ್ಡಬೋರಯ್ಯ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು.

‘ಹತ್ತು ಎಕರೆಯಲ್ಲಿ 1,500 ಪೇರಲಾ, 150 ಜಂಬು ನೇರಳೆ, 100 ಮಾವು, 100 ತೆಂಗು, 1 ಸಾವಿರ ನುಗ್ಗೆ, 1 ಸಾವಿರ ದಾಳಿಂಬೆ ಮಧ್ಯೆ ಶ್ರೀಗಂಧ ಬೆಳೆದಿದ್ದೇನೆ. ಈ ಬೆಳೆಗಳಿಂದ ವರ್ಷಕ್ಕೆ ಕನಿಷ್ಠ ₹ 6-7 ಲಕ್ಷ ಆದಾಯ ಬರಲಿದೆ. 15 ವರ್ಷಕ್ಕೆ ಮರವೊಂದರಿಂದ ₹ 2 ಲಕ್ಷ ಆದಾಯ ಬರುತ್ತದೆ. ನಾಲ್ಕೈದು ಎಕರೆಯ ಸಣ್ಣ ರೈತರೂ ಕೋಟಿಗಟ್ಟಲೆ ಹಣ ನೋಡಬಹುದಾಗಿದೆ’ ಎನ್ನುತ್ತಾರೆ ಮುನಿಸ್ವಾಮಿ.

‘ಕನಿಷ್ಠ 12ರಿಂದ 15 ವರ್ಷಕ್ಕೆ ಶ್ರೀಗಂಧ ಕಟಾವಿಗೆ ಬರಲಿದೆ. ಒಂದು ಕೆ.ಜಿ.ಗೆ ಮಾರುಕಟ್ಟೆಯಲ್ಲಿ ₹ 16 ಸಾವಿರ ಬೆಲೆ ಇದೆ. 15 ವರ್ಷದ ಮರ ಕನಿಷ್ಠ 12ರಿಂದ 15 ಕೆ.ಜಿ. (ಹಾಟ್ ವುಡ್) ಇರುತ್ತದೆ. ಪ್ರತಿ ಮರಕ್ಕೆ ಅಂದಾಜು ₹ 1.50 ಲಕ್ಷ ಬೆಲೆ ಸಿಗಲಿದೆ. ಒಂದು ಎಕರೆಗೆ ಸುಮಾರು 450 ಗಿಡಗಳನ್ನು ಬೆಳೆಯಬಹುದು. ಇದರಿಂದ ಎಕರೆಗೆ 15 ವರ್ಷದಲ್ಲಿ ಕನಿಷ್ಠ ₹ 6ರಿಂದ ₹ 7 ಕೋಟಿ ಲಾಭ ಸಿಗುತ್ತದೆ’ ಎಂದು ಕೆಎಸ್ಡಿಎಲ್ ಸಂಸ್ಥೆಯ ನಿವೃತ್ತ ಅಧಿಕಾರಿ ನಾಗೇಶ್ ಹೇಳುತ್ತಾರೆ.

ರೈತ ನೂರು ಗಿಡ ನೆಟ್ಟರೆ ನವಿಲು, ಗಿಳಿ ಮುಂತಾದ ಪಕ್ಷಿಗಳು ಹಿಕ್ಕೆಗಳ ಪ್ರಸಾರದ ಮೂಲಕ ಅಸಂಖ್ಯ ಗಿಡಗಳು ಹುಟ್ಟುವ ಮೂಲಕ ರೈತರಿಗೆ ಲಾಭ ತರಲಿದೆ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ ಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.