ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ದೂರು ಹಿಂಪಡೆಯಲಿ: ಆಗ್ರಹ

Last Updated 2 ಜೂನ್ 2020, 12:02 IST
ಅಕ್ಷರ ಗಾತ್ರ

ದಾವಣಗೆರೆ: ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಶೇಖರಪ್ಪ ನಗರದ ನಿವಾಸಿ ನೀಡಿರುವ ಸುಳ್ಳು ದೂರನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಅಲೆಕ್ಸಾಂಡರ್‌ ಜಾನ್‌, ಮುಖಂಡ ಎಸ್‌. ನಟರಾಜ್‌ ಆಗ್ರಹಿಸಿದ್ದಾರೆ.

ಶೇಖರಪ್ಪ ನಗರದಲ್ಲಿ ವಿತರಿಸಲು ಶಾಮನೂರು ಕುಟುಂಬ 200 ಕಿಟ್‌ಗಳನ್ನು ನೀಡಿತ್ತು. ಆದರೆ 450 ಕುಟುಂಬಗಳಿಗೆ ಕಿಟ್ ಅವಶ್ಯ ಇತ್ತು. ಹಾಗಾಗಿ ಕಾಂಗ್ರೆಸ್‌ ಕಾರ್ಯಕರ್ತ ದಾದಾಪೀರ್‌ ಸ್ವತಃ ವೆಚ್ಚ ಮಾಡಿ 150 ಕಿಟ್‌ ತಯಾರಿಸಿ ವಿತರಿಸಿದ್ದರು. ಕಿಟ್‌ ವಿತರಣೆ ಮಾಡುವಾಗ ಆರಂಭದಲ್ಲೇ ಶ್ರೀಕಾಂತ್‌ ಅವರ ಕುಟುಂಬಕ್ಕೆ ನೀಡಲಾಗಿತ್ತು. ಆದರೂ ಕಿಟ್‌ ನೀಡಿಲ್ಲ. ಕೇಳಿದಾಗ ಹಲ್ಲೆ ನಡೆಸಿದ್ದಾರೆ ಎಂದು ಶ್ರೀಕಾಂತ್‌ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಶ್ರೀಕಾಂತ್‌ ತಿಂಗಳ ಹಿಂದೆ ಮರದಿಂದ ಬಿದ್ದು ಗಾಯಗೊಂಡಿದ್ದಾರೆ. ಈಗ ಅದನ್ನೇ ತೋರಿಸಿ ಅಲ್ಪಸಂಖ್ಯಾತರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಈ ಬಗ್ಗೆ ಸರಿಯಾದ ತನಿಖೆ ನಡೆಸಬೇಕು. ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ದಾಖಲಿಸಿರುವ ಪ್ರಕರಣವನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಲ್‌ ವೀರೇಶ್‌, ರಂಗನಾಥ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT