ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯತ್ರಿ ಸಿದ್ದೇಶ್ವರ ಪರ ಯದುವೀರ್ ಒಡೆಯರ್‌ ಪ್ರಚಾರ ಇಂದು

Published 3 ಮೇ 2024, 0:27 IST
Last Updated 3 ಮೇ 2024, 0:27 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್‌ ಒಡೆಯರ್‌ ಅವರು ನಗರದಲ್ಲಿ ಮೇ 3ರಂದು ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆ‍ಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ನಾಗಪ್ಪ ತಿಳಿಸಿದರು.

‘ಗಾಯತ್ರಿ ಸಿದ್ದೇಶ್ವರ ಪರ ಯದುವೀರ್‌ ಒಡೆಯರ್‌ ದಾವಣಗೆರೆ ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ನಗರದ ಭಗತ್‌ಸಿಂಗ್‌ ನಗರದ ಚೌಡಮ್ಮದೇವಿ ದೇವಸ್ಥಾನದಿಂದ ಬೆಳಿಗ್ಗೆ 9ರಿಂದ ಆರಂಭವಾಗುವ ಬೃಹತ್‌ ರೋಡ್‌ ಶೋ ನಿಟುವಳ್ಳಿ ರಸ್ತೆ, ಕೆಟಿಜೆ ನಗರ ಮೂಲಕ ಶಿವಪ್ಪಯ್ಯ ಸರ್ಕಲ್‌ನಲ್ಲಿ ಸಮಾರೋಪಗೊಳ್ಳಲಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಜೆ 4ಕ್ಕೆ ದಾವಣಗೆರೆ 1ನೇ ವಾರ್ಡ್‌ನ ಗಾಂಧಿನಗರದ ಹುಲಿಗೆಮ್ಮ ದೇವಸ್ಥಾನದಿಂದ ವಿಠಲ ಮಂದಿರ, ಚೌಕಿಪೇಟೆ, ಮಂಡಿಪೇಟೆ ಮಾರ್ಗವಾಗಿ ಗಡಿಯಾರ ಕಂಬದಲ್ಲಿ ಸಮಾರೋಪಗೊಳ್ಳಲಿದೆ. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ಮುಖಂಡ ಯಶವಂತರಾವ್‌ ಜಾಧವ್‌ ಸೇರಿದಂಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಯಶವಂತರಾವ್‌ ಜಾಧವ್‌, ಅನಿಲ್‌ ನಾಯ್ಕ್, ಧನಂಜಯ ಕಡ್ಲೇಬಾಳ್‌, ಆರ್‌. ಲಕ್ಷ್ಮಣ್‌, ಸತೀಶ್‌ ಕೋಳೆನಹಳ್ಳಿ, ಟಿಂಕರ್‌ ಮಂಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT