ವಿದ್ಯಾರ್ಥಿ ಕಾಲಿನ ಮೇಲೆ ಹರಿದ ಲಾರಿ: ಮಾನವೀಯತೆ ಮೆರೆದ ಗ್ರಾಮಸ್ಥರು
ಜಗಳೂರು: ತಾಲ್ಲೂಕಿನ ಮುಸ್ಟೂರು ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮೇಲೆ ಸೋಮವಾರ ಲಾರಿ ಹರಿದು ತೀವ್ರವಾಗಿ ಗಾಯಗೊಂಡಿದ್ದು, ಗ್ರಾಮಸ್ಥರು ಹಾಗೂ ಆ್ಯಂಬುಲೆನ್ಸ್ ಚಾಲಕರು ಆಸ್ಪತ್ರೆಗೆ ಕರೆದೋಯ್ದು ಮಾನವೀಯತೆ ಮೆರೆದಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಕಡಬನಕಟ್ಟೆ ಗ್ರಾಮದ ರಕ್ಷಿತ್ (16) ಗಾಯಗೊಂಡ ವಿದ್ಯಾರ್ಥಿ. ಜಗಳೂರಿನಿಂದ ಮುಸ್ಟೂರು ಗ್ರಾಮಕ್ಕೆ ಬಂದಿಳಿದ ವಿದ್ಯಾರ್ಥಿ ರಸ್ತೆ ದಾಟಿಕೊಂಡು ಕಡಬನಕಟ್ಟೆಗೆ ಬಸ್ ಹತ್ತಲು ಹೋಗುವ ಸಮಯದಲ್ಲಿ ಜಗಳೂರಿನ ಮಾರ್ಗವಾಗಿ ಬಂದ ಲಾರಿ ವಿದ್ಯಾರ್ಥಿಯ ಕಾಲಿನ ಮೇಲೆ ಹರಿದಿದೆ.
ಅಪಘಾತ ಸಂಭವಿಸಿದ ಕೂಡಲೇ ನೆರವಿಗೆ ಧಾವಿಸಿ ಬಂದ ಗ್ರಾಮಸ್ಥರು ಆಂಬ್ಯುಲೆನ್ಸ್ ಕರೆಸಿ ಚಿತ್ರದುರ್ಗಕ್ಕೆ ಚಿಕಿತ್ಸೆಗೆ ಕಳುಹಿಸಲು ನೆರವಾದರು. ರಕ್ಷಿತ್ನನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕರೆದೊಯ್ಯಲಾಗಿದೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.