ಮಾಯಕೊಂಡ: ಕನಿಷ್ಟ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್ ಹಾಲೇಶಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಪ್ರತೀ ವರ್ಷ ಮೆಕ್ಕೆಜೋಳ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದರೂ ದರ ಮಾತ್ರ ಮೇಲೇಳದೆ ಕುಸಿಯುತ್ತಿದೆ. ಇದಕ್ಕೆ ದಾವಣಗೆರೆ ದಲ್ಲಾಳಿಗಳ ಲಾಬಿಯೆ ಕಾರಣ ಎಂದು ಕರ್ನಾಟಕ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆರೋಪಿಸಿದರು.

ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆಯನ್ನು ಬಿಗಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಆದ್ದರಿಂದ ₹ 2,400 ನಿಗದಿ ಮಾಡಿದ್ದರೂ ದಾವಣಗೆರೆ ಜಿಲ್ಲೆಯಲ್ಲಿ ₹ 1,300 ರಿಂದ ₹ 1,800ಕ್ಕೆ ಖರೀದಿ ಮಾಡುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ. ಜಗಳೂರು ತಾಲ್ಲೂಕಿನಲ್ಲಿ ಪ್ರತಿ ಕ್ವಿಂಟಲ್ಗೆ ₹ 1,950, ಕೂಡ್ಲಿಗಿಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹ 2,280ಕ್ಕೆ ಖರೀದಿ ಮಾಡುತ್ತಿದ್ದಾರೆ. ಆದರೆ ದಾವಣಗೆರೆಯಲ್ಲಿ ಮಾತ್ರ ಮೋಸ ಆಗುತ್ತಿದ್ದು, ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಸೇರಿದಂತೆ ಖರ್ಚು ಹೆಚ್ಚುತ್ತಿದ್ದರೂ ಬೆಳೆಗಳ ದರ ಪಾತಾಳ ಸೇರಿದೆ. ಹಾಗಾಗಿ ದರ ತಗ್ಗಿಸುವ ಖರೀದಿದಾರರಿಗೆ ಜೈಲು ಶಿಕ್ಷೆ ಜೊತೆ ದಂಡ ವಿಧಿಸಿ ಅವರ ಪರವಾನಿಗೆ ರದ್ದು ಮಾಡುವ ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ನಾಳೆಯಿಂದ ಬಸವಾಪಟ್ಟಣ, ಅಣಜಿ, ಜಗಳೂರು ಹಾಗು ನ. 5ನೇ ತಾರೀಖಿನಂದು ದಾವಣಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿನ ಕಾರ್ಗಿಲ್, ಎಸ್ಕೆಎಂ, ವಿಎಚ್ಎಲ್ ಸೇರಿದಂತೆ ವಿವಿಧ ಕಂಪನಿಗಳು ಖರೀದಿ ಮಾಡುವಂತೆ ಸೂಚಿಸಬೇಕು ಎಂದು ರೈತ ಮುಖಂಡ ಹುಚ್ಚವ್ವನಹಳ್ಳಿ ಪ್ರಕಾಶ್ ಒತ್ತಾಯಿಸಿದರು.

ಹೂವಿನ ಮಡು ನಾಗರಾಜ್, ಮುಂಡರಗಿ ರಾಮಣ್ಣ, ಗುಡ್ಡಪ್ಪ, ಭರತ್, ಗುಮ್ಮನೂರು ಭೀಮಣ್ಣ, ಬುಳ್ಳಾಪುರ ರಾಜು, ಲೋಕೇಶ್, ಓಬಳೇಶ್, ಸಂತೋಷ್, ಉಮೇಶ್, ಕಬ್ಬರೂ ತಿಪ್ಪಣ್ಣ, ಆನಗೋಡು ರಾಜಣ್ಣ, ದೊರೆ ರಾಮಣ್ಣ, ಮಧು, ನಾಗಪ್ಪ, ಹೊನ್ನಮರಡಿ ಅಶೋಕ್, ಯರಕನಹಳ್ಳಿ ರುದ್ರಣ್ಣ, ಕುರ್ಕಿ ಹನುಮಂತಪ್ಪ, ಹುಚ್ಚವ್ವನಹಳ್ಳಿ ಸೋಮಶೇಖರ್, ಲಿಂಗರಾಜ್ ರೈತ ಮುಖಂಡರು ಇದ್ದರು.

ಮೆಕ್ಕೆಜೋಳ; ₹2000 ಕ್ಕಿಂತ ಹೆಚ್ಚು ದರ ಸಿಗಲಿ’

ದಾವಣಗೆರೆ: ಎಪಿಎಂಸಿ ಮಾರುಕಟ್ಟೆಯ ಇ-ಟೆಂಡರ್ ವಹಿವಾಟಿನಲ್ಲಿ ಮೆಕ್ಕೆಜೋಳಕ್ಕೆ ₹2000 ಕ್ಕಿಂತ (ಕ್ವಿಂಟಲ್ಗೆ) ಕಡಿಮೆ ದರ ನಮೂದು ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ವರ್ತಕರಿಗೆ ತಾಕೀತು ಮಾಡಿದರು.

ಇಲ್ಲಿನ ಎಪಿಎಂಸಿ ಕಚೇರಿಯಲ್ಲಿ ಬುಧವಾರ ಎಪಿಎಂಸಿ ಅಧಿಕಾರಿಗಳು, ಮೆಕ್ಕೆಜೋಳ ವರ್ತಕರು ಮತ್ತು ರೈತ ಮುಖಂಡರ ಜೊತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ.ಸತೀಶ್ ಮಾತನಾಡಿ, ‘ನಿರಂತರ ಮಳೆಯಿಂದ ತೇವಾಂಶ ಹೆಚ್ಚಿ ಇಳುವರಿ ಕಡಿಮೆಯಾಗಿದೆ. ದರ ಕುಸಿತದಿಂದ ಮೆಕ್ಕೆಜೋಳ ಬೆಳೆದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ₹2,400 ರಿಂದ ₹2,600 ರ ವರೆಗೆ ಇದ್ದ ದರ ಈಗ ₹1,500 ರಿಂದ ₹1,700 ಕ್ಕೆ ಕುಸಿದಿದೆ. ಮೆಕ್ಕೆಜೋಳ ಬೆಳೆದ ರೈತ ದರ ಕುಸಿತದಿಂದ ಕಂಗಾಲಾಗಿದ್ದಾನೆ. ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು’ ಎಂದು ಆಗ್ರಹಿಸಿದರು.

‘ರೈತರು ಒಣಗಿಸಿ ತಂದ್ರೆ ದರದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡಬಹುದು. ಆದರೆ, ರೈತರು ಹಸಿ ಮಾಲು ತರುತ್ತಾರೆ. ಇದರಿಂದಾಗಿ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಮೆಕ್ಕೆಜೋಳ ವರ್ತಕ ಕೆ.ಜಾವೀದ್ ಸಾಬ್ ಹೇಳಿದರು.

‘ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಒಣಗಿಸಲು ವ್ಯವಸ್ಥೆ ಮಾಡಬೇಕು. ದಿನಕ್ಕೆ ಎರಡು ಸಲ ಇ-ಟೆಂಡರ್ ವ್ಯವಸ್ಥೆ ಮಾಡಲಾಗುವುದು. ವರ್ತಕರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಎಪಿಎಂಸಿ ಕಾರ್ಯದರ್ಶಿ ಎಚ್.ಸಿ.ಎಂ ರಾಣಿ, ಸಹಾಯಕ ನಿರ್ದೇಶಕ ಜೆ. ಪ್ರಭು, ದಲಾಲರ ಸಂಘದ ಅಧ್ಯಕ್ಷ ಬೂದಿಹಾಳ ಹಾಲೇಶಗೌಡ್ರು, ಒಬ್ಬನಳ್ಳಿ ಜಾವೀದ್, ಆರ್.ಜಿ.ರುದ್ರೇಶ್, ಬಾಳನಗೌಡ್ರು, ದೊಗ್ಗಳ್ಳಿ ಬಸವರಾಜು, ರೈತ ಮುಖಂಡರಾದ ಹೂವಿನಮಡು ನಾಗರಾಜ್, ಕೋಲ್ಕುಂಟೆ ಬಸಪ್ಪ, ಚಿನ್ನಸಮುದ್ರ ಭೀಮನಾಯ್ಕ, ಐಗೂರು ನಾಗರಾಜಪ್ಪ, ದೊಗ್ಗಳ್ಳಿ ಬಾಬುರಾಜೇಂದ್ರ, ಸಂಜಯ್, ದಶರಥರಾಜು ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.