ಮಾಯಕೊಂಡ: ದಸರಾ ಎಂದಾಕ್ಷಣ ಮನಸಲ್ಲಿ ಬರುವುದು ವಿಶ್ವವಿಖ್ಯಾತ ಮೈಸೂರಿನಲ್ಲಿ ನಡೆಯುವ ಉತ್ಸವ. ಆನೆ, ಅಂಬಾರಿ ಮೆರವಣಿಗೆ. ಅದೇ ರೀತಿಯ ಉತ್ಸವವನ್ನು ಮಾನವ ನಿರ್ಮಿತ ಕೃತಕ ಆನೆಗಳ ನೆರವಿನಿಂದ, ಅಪ್ಪಟ ಗ್ರಾಮೀಣ ಸೊಗಡಿನೊಂದಿಗೆ ಇಲ್ಲಿ ಆಚರಿಸುವುದು ಮಧ್ಯ ಕರ್ನಾಟಕದ ವಿಶೇಷ.

ಮಾಯಕೊಂಡದಲ್ಲಿ ದಸರಾ ಉತ್ಸವದಲ್ಲೂ ಮೈಸೂರಿನಂತೆ ಅಂಬು ಛೇಧ, ಬನ್ನಿ ಮಂಟಪ ಪೂಜೆ, ಆನೆಗಳ ಮೆರವಣಿಗೆ ಇರುತ್ತದೆ. ಇಲ್ಲಿಯೂ ಅಂಬಾರಿ ಇರುತ್ತದೆ. ಅಂಬಾರಿಯಲ್ಲಿ ತಾಯಿ ಚಾಮುಂಡಿ ಬದಲು ಗ್ರಾಮದೇವತೆ ದುರ್ಗಮ್ಮ ದೇವಿಯನ್ನು ಪ್ರತಿಷ್ಠಾಪನೆ ಅದ್ದೂರಿ ಮೆರವಣಿಗೆ ನಡೆಯುತ್ತದೆ. ಜೀವಂತ ಆನೆಗಳ ಬದಲಿಗೆ ಕೃತಕ ಆನೆಗಳನ್ನು ಬಳಸಲಾಗುತ್ತದೆ.

ಇಲ್ಲಿಯೂ ಒಂಬತ್ತು ದಿನಗಳ ಕಾಲ ಅಲಂಕಾರ ಹಾಗೂ ಪೂಜೆ ನೆರವೇರುತ್ತದೆ. ನವಮಿಯಂದು ಮೂರು ಗರಡಿ ಮನೆಗಳಲ್ಲಿ ವಿಶೇಷ ಆಯುಧಪೂಜೆ ನಡೆಸಲಾಗುತ್ತದೆ. ಮಾರನೇ ದಿನ ಗ್ರಾಮದ ಹೊರ ವಲಯದಲ್ಲಿನ ಬನ್ನಿ ಮಂಟಪದ ಬಳಿ ಎಲ್ಲಾ ದೇವರ ಉತ್ಸವ ಮೂರ್ತಿಗಳನ್ನು ಯುವಕರು ಹೊತ್ತೊಯ್ದು, ಹಿರಿಯರು ಅಂಬು ಛೇಧ ನಡೆಸಿಕೊಟ್ಟ ನಂತರ, ಬನ್ನಿ ಮಂಟಪ ಪೂಜೆ ಸಲ್ಲಿಸಲಾಗುತ್ತದೆ. ನಂತರ ಗ್ರಾಮದ ಪ್ರತಿಯೊಬ್ಬರೂ ಬನ್ನಿ (ಶಮೀ) ವಿನಿಮಯ ಮಾಡಿಕೊಂಡು ಹಿರಿಯರಿಂದ ಆಶೀರ್ವಾದ ಪಡೆಯುವುದು ವಾಡಿಕೆ.

ಜಂಬೂ ಸವಾರಿ:

ಬನ್ನಿ ಮುಡಿದ ನಂತರ ಕೃತಕ ಆನೆಗಳ ಡ್ಯಾನ್ಸ್ ವಿಶೇಷವಾಗಿರುತ್ತದೆ. ಗ್ರಾಮದ ಪೇಟೆ ಗರಡಿ, ಕೋಟೆ ಗರಡಿ ಹಾಗೂ ಕಲ್ಗಿ ಗರಡಿಗಳ ಪೈಲ್ವಾನರು ಚಕ್ಕಡಿ ಬಳಸಿ, ಕೃತಕ ಆನೆಗಳ ಮೆರವಣಿಗೆ ಮಾಡುತ್ತಾರೆ. ರಣಬಾಜಿ ಸದ್ದಿಗೆ ಹೆಜ್ಜೆ ಹಾಕುತ್ತಾ, ವಿಶೇಷ ನೃತ್ಯ ಮಾಡುತ್ತಾರೆ. ಮಾನವ ಪಿರಮಿಡ್ ನಿರ್ಮಿಸುತ್ತಾರೆ, ಲಾಗ ಹೊಡೆಯುತ್ತಾರೆ. ಸಾಮು, ದಂಡ ಹೊಡೆಯುವ ಮೂಲಕ ವಿವಿಧ ಪಟ್ಟುಗಳನ್ನು ಪ್ರದರ್ಶಿಸಿ ನೆರೆದಿದ್ದ ಜನರನ್ನು ಯುವ ಪೈಲ್ವಾನರು ರಂಜಿಸುತ್ತಾರೆ. ಅವರಿಗೆ ಹಿರಿಯ ಪೈಲ್ವಾನರು ಮಾರ್ಗದರ್ಶನ ನೀಡುತ್ತಾರೆ.

ಈ ಮೂಲಕ ಗ್ರಾಮೀಣ ಸಂಸ್ಕೃತಿಯ ಕೊಂಡಿಯನ್ನು ಮುಂದುವರಿಸಿ ಮಾಯಕೊಂಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ರಸದೌತಣ ಉಣಬಡಿಸುವ ಮೂಲಕ ಇಲ್ಲಿನ ದಸರಾ ಉತ್ಸವಕ್ಕೆ ತೆರೆ ಬೀಳುತ್ತದೆ.

ಐತಿಹಾಸಿಕ ಹಿನ್ನೆಲೆ:

‘ಪಾಳೇಗಾರರ ಕಾಲದಿಂದಲೂ ಮಾಯಕೊಂಡಕ್ಕೂ ಚಿತ್ರದುರ್ಗಕ್ಕೂ ಬಿಡಿಸಲಾಗದ ನಂಟು. ಮಾಯಕೊಂಡದಲ್ಲಿನ ಮಟ್ಟಿಯು (ದಿಬ್ಬ) ಯುದ್ಧಭೂಮಿಯಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಗ್ರಾಮ ಕುಸ್ತಿಯಲ್ಲಿ ಹೆಸರುವಾಸಿ. ಇಲ್ಲಿಯ ಜಟ್ಟಿಗಳು ಅಖಾಡಾದಲ್ಲಿ ಕೀರ್ತಿ ಸಾಧಿಸಿದ್ದರು. ಅಂದಿನ ಪೈಲ್ವಾನರನ್ನು ಯುದ್ದಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಅಂದಿನಿಂದಲೂ ಗ್ರಾಮದಲ್ಲಿ ದಸರಾ ಆಚರಿಸಲಾಗುತ್ತಿದ್ದು, ಮುಂದುವರಿಸಿಕೊಂಡು ಬರಲಾಗಿದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಮಾಯಕೊಂಡ: ದಸರಾ ಎಂದಾಕ್ಷಣ ತಟ್ಟನೆ ನೆನಪಾಗುವುದು ವಿಶ್ವವಿಖ್ಯಾತ ಮೈಸೂರಿನ ದಸರಾ ಉತ್ಸವದಲ್ಲಿನ ಅಂಬಾರಿ ಹೊತ್ತ ಆನೆಗಳ ಮೆರವಣಿಗೆ ಎಂದರೆ ಅತಿಶಯೋಕ್ತಿ ಅಲ್ಲ. ಇದೇ ಉತ್ಸವವನ್ನೂ ನಾಚಿಸುವಂತ ಅಪ್ಪಟ ಗ್ರಾಮೀಣ ಸೊಗಡಿನ ದಸರಾ ಉತ್ಸವ ಮಾನವ ನಿರ್ಮಿತ ಆನೆಗಳ ಮೂಲಕ ನಡೆಯುವ ಉತ್ಸವ ನೋಡುಗರ ಕಣ್ಮನ ಸೂಜಿಗಲ್ಲಿನಂತೆ ಸೆಳೆಯುವ ದಸರ ಆಚರಣೆ ಮಾಯಕೊಂಡದಲ್ಲಿ ಪ್ರತಿವರ್ಷ ನಡೆಯುತ್ತದೆ.

ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಗ್ರಾಮದಲ್ಲಿ ಜರಗುವ ಐತಿಹಾಸಿಕ ದಸರಾ ಉತ್ಸವ ಬಲು ವಿಶೇಷ. ಕಾರಣ ಇಲ್ಲಿಯೂ ಮೈಸೂರಿನಲ್ಲಿ ನಡೆಯುವ ಹಾಗೆ ಅಂಬು ಛೇಧ ಬನ್ನಿ ಮಂಟಪ ಪೂಜೆ ಆನೆಗಳ ಮೆರವಣಿಗೆ ಇರುತ್ತದೆ. ಇಲ್ಲಿಯೂ ಅಂಬಾರಿ ಇರುತ್ತದೆ. ಅಂಬಾರಿಯಲ್ಲಿ ತಾಯಿ ಚಾಮುಂಡಾಂಬೆಯ ಬದಲು ಗ್ರಾಮದೇವತೆ ತಾಯಿ ಶ್ರೀದುರ್ಗಮ್ಮ ದೇವಿಯ ಪ್ರತಿಷ್ಠಾಪನೆ ಮಾಡಿ ಮೆರವಣಿಗೆ ನಡೆಯುತ್ತದೆ. ಇಲ್ಲಿಯೂ ವಿಶ್ವ ವಿಖ್ಯಾತ ಮೈಸೂರಿನಲ್ಲಿ ನಡೆಯುವ ಹಾಗೆ ದೇವಿ ದುರ್ಗಮ್ಮ ನವರಾತ್ರಿ ಪೂಜೆಗೆ ಕೂರಿಸಲಾಗುತ್ತದೆ. ಒಂಭತ್ತು ದಿನಗಳ ಕಾಲ ಅಲಂಕಾರ ಹಾಗು ಪೂಜೆ ನೆರವೇರಿದ ನಂತರ. ಮೂರು ಗರಡಿ ಮನೆಗಳಲ್ಲಿ ವಿಶೇಷ ಆಯುಧಪೂಜೆ ನಡೆಸಲಾಗುತ್ತದೆ. ಮಾರನೇ ದಿನ ಗ್ರಾಮದ ಹೊರ ವಲಯದಲ್ಲಿನ ಬನ್ನಿ ಮಂಟಪದ ಬಳಿ ಗ್ರಾಮದ ಎಲ್ಲಾ ದೇವರ ಉತ್ಸವ ಮೂರ್ತಿಗಳನ್ನು ಯುವಕರು ಹೊತ್ತೊಯ್ದು ಊರ ಗೌಡ ಅಂಬು ಛೇಧ ನಡೆಸಿಕೊಟ್ಟ ನಂತರ ಬನ್ನಿ ಮಂಟಪ್ಪ ಪೂಜೆ ಸಲ್ಲಿಸಲಾಗುತ್ತದೆ. ನಂತರ ಗ್ರಾಮದ ಪ್ರತಿಯೊಬ್ಬರು ಬನ್ನಿ ಪತ್ರೆ ವಿನಿಮಯ ಮಾಡಿಕೊಂಡು ಹಿರಿಯರಿಂದ ಆಶೀರ್ವಾದ ಪಡೆಯಲಾಗುತ್ತದೆ.

ಮಾನವ ನಿರ್ಮಿತ ಆನೆಗಳ ಮೆರವಣಿಗೆ ಜಂಬೂ ಸವಾರಿ: ಅಂಬುಛೇಧದ ನಂತರ ಬನ್ನಿ ಮುಡಿದ (ವಿನಿಮಯ) ನಂತರ ಕೃತಕ ಆನೆಗಳ ಡ್ಯಾನ್ಸ್ ವಿಶೇಷಾಗಿರುತ್ತದೆ. ಗ್ರಾಮದ ಪೇಟೆ ಗರಡಿ ಕೋಟೆ ಗರಡಿ ಹಾಗು ಕಲ್ಗಿ ಗರಡಿಗಳ ಪೈಲ್ವಾನರು ಚಕ್ಕಡಿ ಬಳಸಿ ಆನೆಗಳನ್ನ ನಿರ್ಮಿಸಿ ಆನೆಗಳ ಮೆರವಣಿಗೆ ಮಾಡುತ್ತಾರೆ. ರಣಬಾಜಿ ಸದ್ದಿಗೆ ಹೆಜ್ಜೆ ಹಾಕುತ್ತಾ ವಿಶೇಷ ನೃತ್ಯ ಮಾಡುತ್ತಾರೆ. ಮಾನವ ಪಿರಾಮಿಡ್ ಹಾಗು ಲಾಗ ಹೊಡೆಯುತ್ತಾರೆ. ಸಾಮು ದಂಡೆ ಹೊಡೆಯುವ ಮೂಲಕ ವಿವಿಧ ಪಟ್ಟುಗಳನ್ನ ಪ್ರದರ್ಶಿಸಿ ನೆರೆದಿದ್ದ ಜನರನ್ನ ಯುವಕರು ರಂಜಿಸುತ್ತಾರೆ. ಅವರಿಗೆ ಹಿರಿಯ ಪೈಲ್ವಾನರು ಮಾರ್ಗದರ್ಶನ ನೀಡುತ್ತಾರೆ. ಗ್ರಾಮದ ಪೇಟೆ ಬೀದಿಯಲ್ಲಿ ದುರ್ಗಮ್ಮ ದೇವಿಯ ಅಂಬಾರಿ ಮೇಲೆ ಮೆರವಣಿಗೆ: ಮೈಸೂರಿನಲ್ಲಿ ಅಂಬಾರಿಯಲ್ಲಿ ತಾಯಿ ಚಾಮುಂಡಾಂಬೆ ಮೆರವಣಿಗೆ ನಡೆಯುತ್ತದೆ. ಆದರೆ ಮಾಯಕೊಂಡ ಗ್ರಾಮದ ತಾಯಿ ದುರ್ಗಮ್ಮ ದೇವಿಯನ್ನು ಕಲ್ಗಿ ಗರಡಿಯ ಆನೆ ಮೇಲೆ ಪ್ರತಿಷ್ಠಾಪನೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಆಂಜನೇಯ ವೃತ್ತದಲ್ಲಿ ಮೂರು ಗರಡಿಗಳ ಆನೆಗಳು ಒಂದೆಡೆ ಸೇರಿ ಸಾಮರಸ್ಯದ ನೃತ್ಯ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಆ ದೃಶ್ಯ ಕಣ್ತುಂಬಿಕೊಳ್ಳುವುದಕ್ಕೆ ಗ್ರಾಮಕ್ಕೆ ಮಾಯಕೊಂಡ ಹಾಗು ಪರ ಊರುಗಳಿಂದ ಸಾವಿರಾರು ಜನ ಆಗಮಿಸುತ್ತಾರೆ.

ಈ ಮೂಲಕ ಗ್ರಾಮೀಣ ಸಂಸ್ಕೃತಿಯ ಕೊಂಡಿಯನ್ನು ಮುಂದುವೆರೆಸಿ ಮಾಯಕೊಂಡ ಹಾಗು ಸುತ್ತಮುತ್ತಲ ಸಾವಿರಾರು ಜನರಿಗೆ ಉಣಬಡಿಸುವ ಮೂಲಕ ಮಾಯಕೊಂಡದ ದಸರಾ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಐತಿಹಾಸಿಕ ಹಿನ್ನೆಲೆ: ಚಿತ್ರದುರ್ಗದ ಪಾಳೇಗಾರರ ಕಾಲದಿಂದಲೂ ಮಾಯಕೊಂಡಕ್ಕೂ ಚಿತ್ರದುರ್ಗಕ್ಕೂ ಬಿಡಿಸಲಾಗದ ನಂಟು. ಮಾಯಕೊಂಡದ ಮಟ್ಟಿ ಯುದ್ದಭೂಮಿಯಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಗ್ರಾಮ ಕುಸ್ತಿಯಲ್ಲಿ ಹೆಸರುವಾಸಿ. ಇಲ್ಲಿಯ ಜಟ್ಟಿಗಳು ಅಖಾಡದಲ್ಲಿ ಕೀರ್ತಿ ಸಾಧಿಸಿದ್ದರು. ಅಂದಿನ ಪೈಲ್ವಾನರನ್ನ ಯುದ್ದಗಳಲ್ಲಿ ಬಳಸಿಕೊಳ್ಳುತ್ತಿದ್ದರು. ಅಂದಿನಿಂದಲೂ ಗ್ರಾಮದಲ್ಲಿ ದಸರಾ ಆಚರಣೆ ಮಾಡಲಾಗುತ್ತಿದೆ. ಇಂದಿನವರೆಗೂ ಮುಂದುವರೆದು ಬಂದಿದೆ ಎನ್ನುತ್ತಾರೆ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.