ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರಾರ್ಜಿ ದೇಸಾಯಿ ಶಾಲೆ: 50 ವಿದ್ಯಾರ್ಥಿನಿಯರು ಅಸ್ವಸ್ಥ

Last Updated 15 ಫೆಬ್ರುವರಿ 2020, 9:40 IST
ಅಕ್ಷರ ಗಾತ್ರ

ದಾವಣಗೆರೆ: ನಿಜಲಿಂಗಪ್ಪ ಬಡಾವಣೆಯ ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ವಸತಿ ಶಾಲೆಯ 50 ವಿದ್ಯಾರ್ಥಿನಿಯರು ಗುರುವಾರ ತಡರಾತ್ರಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಜಿ.ಡಿ. ರಾಘವನ್ ನೇತೃತ್ವದ ತಂಡ ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಗೆ ಚಿಕಿತ್ಸೆ ನೀಡಿದೆ.

ತಾಲೂಕು ವೈದ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್, ನಗರ ಕುಟುಂಬ ಕಲ್ಯಾಣ ಕೇಂದ್ರದ ವೈದ್ಯಾಧಿಕಾರಿ ಡಾ. ಪಿ.ಕೆ. ವೆಂಕಟೇಶ್, ಆರೋಗ್ಯ ಸುರಕ್ಷತಾ ಅಂಕಿತಾಧಿಕಾರಿ ಡಾ.ಎಂ.ಕೆ. ರುದ್ರಸ್ವಾಮಿ, ರೋಗಶಾಸ್ತ್ರಜ್ಞ ಡಾ.ಕೆ.ಎಚ್. ಯತೀಶ್, ಹಿರಿಯ ಆರೋಗ್ಯ ಸಹಾಯಕ ಆರ್.ಲೋಕೇಶ್, ಆಹಾರ ಸುರಕ್ಷತಾ ಅಧಿಕಾರಿ ಎಚ್.ಕೊಟ್ರೇಶ್ ಇದ್ದರು.

‘ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು ಆರೋಗ್ಯದಿಂದ ಇದ್ದಾರೆ. ಬುಧವಾರ ಆಹಾರದ ಮೆನು ಪ್ರಕಾರ ವಿದ್ಯಾರ್ಥಿ
ಗಳಿಗೆ ಚಿಕನ್ ನೀಡಲಾಗಿತ್ತು. ಗುರುವಾರ ರಾತ್ರಿ ಮುದ್ದೆ ಸಾಂಬಾರು ಹಾಗೂ ಮೊಟ್ಟೆ ನೀಡಿದ್ದು, ಅಲ್ಲಿನ ಫಿಲ್ಟರ್ ಸರಿ ಇಲ್ಲದ್ದರಿಂದ 25 ಲೀಟರ್‌ನ ಕ್ಯಾನ್ ಮೂಲಕ ನೀರು ಪೂರೈಸಲಾಗಿತ್ತು. ಆರೋಗ್ಯ ವ್ಯತ್ಯಾಸಕ್ಕೆ ಕಾರಣ ತಿಳಿದು ಬಂದಿಲ್ಲ. ಅಕ್ಕಿ, ಬೇಳೆ ಎಣ್ಣೆ ಹಾಗೂ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ' ಎಂದು ಎಂದು ಡಾ.ಜಿ.ಡಿ. ರಾಘವನ್ ತಿಳಿಸಿದ್ದಾರೆ.

ಪ್ರಾಂಶುಪಾಲರು, ಮೇಲ್ವಿಚಾರಕರಿಗೆ ಉತ್ತಮ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಎಲ್ಲಾ 50 ಮಕ್ಕಳು ಚಿಕಿತ್ಸೆಯ ನಂತರ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT