ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಗಳ ಮಾರಣಹೋಮ: ದೂರು

Last Updated 13 ಏಪ್ರಿಲ್ 2022, 4:19 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಮೋತಿ ವೀರಪ್ಪ ಕಾಲೇಜು ಹಿಂಭಾಗದಲ್ಲಿ ಖಾಸಗಿಯವರ ನಿವೇಶನದ ಎದುರು ಮರಗಳಿವೆ ಎಂಬ ಕಾರಣಕ್ಕೆ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯಲಾಗಿದೆ.

‘ಪ್ರಭಾವಿ ವ್ಯಕ್ತಿಯೊಬ್ಬರ ನಿವೇಶನಕ್ಕೆ ಮರಗಳು ಅಡ್ಡವಾಗುತ್ತವೆ ಎಂಬ ಕಾರಣಕ್ಕೆ ಕಡಿಯಲಾಗಿದೆ. ಜಾಗತಿಕ ತಾಪಮಾನ ಏರುತ್ತಿರುವ ಸಮಯದಲ್ಲಿ ಸರ್ಕಾರಿ ಜಾಗದಲ್ಲಿಯೂ ಮರಗಳನ್ನು ಉಳಿಸಿಕೊಳ್ಳದಿರುವುದು ವಿಪರ್ಯಾಸ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದೇವೆ. ಆದರೆ ಅರಣ್ಯ ಇಲಾಖೆಯ ಕೆಳಗಿನ ಅಧಿಕಾರಿಗಳು ಲೈಸನ್ಸ್‌ ನೀಡಿದ್ದಾರೆ. ಪಾಲಿಕೆಯಿಂದಲೂ ಒಳಗೊಳಗೆ ಪರ್ಮಿಶನ್‌ ತಗೊಂಡಿದ್ದಾರೆ. ನಾಳೆ ವಲಯ ಅರಣ್ಯ ಅಧಿಕಾರಿಗೆ ಸಾಲುಮರದ ವೀರಾಚಾರ್‌ ಸಹಿತ ಪರಿಸರ ಪ್ರೇಮಿಗಳೆಲ್ಲ ಹೋಗಿ ದೂರು ನೀಡಲಿದ್ದೇವೆ’ ಎಂದು ಪರಿಸರ ಪ್ರೇಮಿ ಕೆ.ಟಿ. ಗೋಪಾಲ ಗೌಡ ತಿಳಿಸಿದ್ದಾರೆ.

‘ಮರ ಕಡಿದಿರುವ ಬಗ್ಗೆ ಮಾಹಿತಿ ಇಲ್ಲ. ಪರಿಶೀಲನೆ ಮಾಡಲಾಗುವುದು’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ. ವಲಯ ಅರಣ್ಯಾಧಿಕಾರಿ ಕರೆ ಸ್ವೀಕರಿಸದ ಕಾರಣ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT