ಶುಕ್ರವಾರ, ಮೇ 27, 2022
31 °C

ಮೇ 8ರಂದು ಯುಗಾದಿ ಸಂಭ್ರಮ ರಾಜ್ಯಮಟ್ಟದ ಕವಿಗೋಷ್ಠಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ಇಲ್ಲಿನ ಚಿಂತನ ಪ್ರತಿಷ್ಠಾನ ಮತ್ತು ಪಂಡಿತ್ ಪುಟ್ಟರಾಜ ಸೇವಾ ಸಮಿತಿಯಿಂದ ನಗರದ ಮರಿಯ ಸದನದಲ್ಲಿ ಮೇ 8ರಂದು ರಾಜ್ಯಮಟ್ಟದ ಕವಿ, ಕಾವ್ಯ ಸಮ್ಮೇಳನದ ಅಂಗವಾಗಿ ಯುಗಾದಿ ಸಂಭ್ರಮ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.

ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಆಸಕ್ತಿ ಇರುವ ಕವಿಗಳು ಸ್ವರಚಿತ ಕವನಗಳನ್ನು ಏ.25ರ ಒಳಗೆ ಸುಬ್ರಹ್ಮಣ್ಯ ನಾಡಿಗೇರ, ಅಧ್ಯಕ್ಷರು, ಚಿಂತನ ಪ್ರತಿಷ್ಠಾನ, ನಂ.194, ನಾಡಿಗೇರ ನಿಲಯ, ಕೋಟೆ, ಹರಿಹರ-577601, ದಾವಣಗೆರೆ. ಮೊ.ನಂ. 9242046726 ಈ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು. ಕವನಗಳು 20ರಿಂದ 25 ಸಾಲು ಮೀರಿರಬಾರದು. ಒಂದು ಕವನ ಆಯ್ಕೆ ಮಾಡಿ ಗೋಷ್ಠಿಯಲ್ಲಿ ವಾಚನ ಮಾಡಲು ಅವಕಾಶ ನೀಡಲಾಗುವುದು. ಆಯ್ಕೆಯಾದ ಕವನ ವಾಚನ ಮಾಡಲು ಕವಿ ತಮ್ಮ ಕೈಬರಹ ಅಥವಾ ಮುದ್ರಿತ ಪ್ರತಿಯನ್ನು ತರಬೇಕು. ಮೊಬೈಲ್ ನೋಡಿಕೊಂಡು ವಾಚನಕ್ಕೆ ಅವಕಾಶವಿಲ್ಲ.
ಕವನ ವಾಚನಕ್ಕೆ ಯಾವುದೇ ನೋಂದಣಿ ಶುಲ್ಕ ಇಲ್ಲ. ಭಾಗವಹಿಸುವ ಕವಿಗಳಿಗೆ ಸಂಸ್ಥೆಯಿಂದ ಸತ್ಕರಿಸಿ, ಅಭಿನಂದನಾ ಪತ್ರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು