ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಆನ್‌ಲೈನ್ ವಂಚನೆ: ₹3.5 ಲಕ್ಷ ಕಳೆದುಕೊಂಡ ಮಹಿಳೆ

Published 8 ನವೆಂಬರ್ 2023, 6:27 IST
Last Updated 8 ನವೆಂಬರ್ 2023, 6:27 IST
ಅಕ್ಷರ ಗಾತ್ರ

ನ್ಯಾಮತಿ: ಬೆಂಗಳೂರಿನಲ್ಲಿ ವಾಸವಿರುವ ತಾಲ್ಲೂಕಿನ ಗ್ರಾಮವೊಂದರ ಮಹಿಳೆ, ಪಾರ್ಟ್‌ಟೈಮ್ ಕೆಲಸದ ಆಮಿಷದಿಂದ ₹3.56 ಲಕ್ಷ ಕಳೆದುಕೊಂಡಿದ್ದು, ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಕಳುಹಿಸಿದ್ದ ವಂಚಕರು, ದಿನಕ್ಕೆ ₹3,000ದಿಂದ ₹,8000ವರೆಗೆ ದುಡಿಯಬಹುದು ಎಂದು ಮಹಿಳೆಯ ಮನವೊಲಿಸಿದ್ದರು.

‘ಟೆಲಿಗ್ರಾಂ ಆ್ಯಪ್‌ನಲ್ಲಿ ಜಾಬ್‌ ಲಿಂಕ್ ಕಳುಹಿಸಿ, ಕೆಲವು ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಕಮಿಷನ್‌ ಬರುತ್ತದೆ ಎಂದು ಹೇಳಿದ್ದರು. ಅದರಂತೆ ಕೆಲವು ಟಾಸ್ಕ್‌ ಪೂರೈಸಿದ ಮೇಲೆ ನನಗೆ ಕಮಿಷನ್‌ ಬಂದಿದೆ ಎಂದು ತೋರಿಸಿದ್ದರು. ನಂತರ ಕೆಲವು ಟಾಸ್ಕ್‌ಗಳನ್ನು ಕೊಟ್ಟು ಹಂತಹಂತವಾಗಿ ನನಗೆ ಕಮಿಷನ್ ಬರುತ್ತಿದೆ ಎಂದು ಬಿಂಬಿಸುತ್ತಾ ಹೋದರು. ಕೊನೆಗೆ ಕಮಿಷನ್ ಹಣವನ್ನು ಪಡೆಯಬೇಕಾದರೆ, ನಾನು ಹಣ ಪಾವತಿಸಬೇಕು ಎಂದು ಸೂಚಿಸಿದರು. ಹಂತಹಂತವಾಗಿ ನನ್ನಿಂದ ಹಣ ಪಡೆಡು ವಂಚಿಸಿದ್ದಾರೆ.  ಅನುಮಾನ ಬಂದ ಮೇಲೆ ಸೈಬರ್ ಠಾಣೆಗೆ ದೂರು ನೀಡಿದ್ದೇನೆ’ ಎಂದು ವಂಚನೆಗೊಳಗಾದ ಮಹಿಳೆಯು ನ್ಯಾಮತಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT