ಬುಧವಾರ, ಮೇ 25, 2022
22 °C

ದಾವಣಗೆರೆ: ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿ ಮಕ್ಕಳ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ವತಿಯಿಂದ ತರಳಬಾಳು ಬಡಾವಣೆಯಲ್ಲಿರುವ ಮಾಗನೂರು ರಾಜಶೇಖರ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಿಸಿ ಶನಿವಾರ ಮಕ್ಕಳ ದಿನವನ್ನು ಆಚರಿಸಿತು.

ಸಂಸ್ಥೆಯ ಅಧ್ಯಕ್ಷೆ ಭಾರತಿ ಕೇಶವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನಿರ್ದೇಶಕರ ಕಚೇರಿ ಅಧಿಕಾರಿ ಜಗದೀಶ್ವರ್‌ ಬಿ.ಎಸ್‌., ಮುಖ್ಯೋಪಾಧ್ಯಾಯರಾದ ಅಜ್ಜಣ್ಣ ಬಿ. ಉಪಸ್ಥಿತರಿದ್ದರು. 

ಮಕ್ಕಳ ದಿನಾಚರಣೆಗೆ ಭಾನುವಾರ ಬಂದಿರುವುದರಿಂದ ಶನಿವಾರ ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಲಾಯಿತು. ವಿಜೇತ ಮಕ್ಕಳಿಗೆ ಜಾಮಿಟ್ರಿ ಬಾಕ್ಸ್, ಎಕ್ಸಾಮ್ ಪ್ಯಾಡ್ , ಕ್ರಾಯೊನ್ಸ್‌ ವಿತರಿಸಲಾಯಿತು. ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿ ಮತ್ತು ಎರಡನೇ ತರಗತಿಯ ಪುಟಾಣಿಗಳು ಭಾಗವಹಿಸಿದ್ದರು.ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಯಿತು.

ಪುಷ್ಪ ನಾರಾಯಣಸ್ವಾಮಿ, ಸುಧಾ ಶಿಲ್ಪಾ ರವಿ, ವಿಜಯ ಪಿ. ಹಳಕಟ್ಟಿ, ಪುಷ್ಪಾಂಜಲಿ ಸಿದ್ದೇಶ್ ಪ್ರಾಯೋಜಕತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು