ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ

Last Updated 6 ಜನವರಿ 2020, 13:49 IST
ಅಕ್ಷರ ಗಾತ್ರ

ದಾವಣಗೆರೆ: ಜಯದೇವಶ್ರೀಗಳ 63ನೇ ಸ್ಮರಣೋತ್ಸವ ಅಂಗವಾಗಿ ನಗರದ ಶಿವಯೋಗಾಶ್ರಮದಲ್ಲಿ ಸೋಮವಾರ ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಸಮಾರಂಭ ನಡೆಯಿತು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಮಕ್ಕಳಿಗೆ ಬಾಲ್ಯದಲ್ಲೇ ಚಿತ್ರ ಬಿಡಿಸುವ ಹವ್ಯಾಸ ಕಲಿಸಬೇಕು. ಆಗ ಕೈಬರಹ ದುಂಡಗೆ ಇರಲು ಸಾಧ್ಯವಾಗುತ್ತದೆ. ನಾನು ಬಾಲ್ಯದಲ್ಲಿ ಚಿತ್ರಬಿಡಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದೆ. ಹಾಗಾಗಿ ನನ್ನ ಅಕ್ಷರಗಳು ದುಂಡಗಿವೆ ಎಂದು ಶಿಕ್ಷಕರು ಪ್ರಶಂಸಿಸಿದ್ದರು. ಕಲೆಯಿಂದ ಜೀವನದ ಪ್ರಗತಿಯಾಗುತ್ತದೆ. ಮಕ್ಕಳೊಳಗೆ ಇರುವ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ’ ಎಂದು ಹೇಳಿದರು.

100 ಶಾಲಾ ಮಕ್ಕಳು ಭಾಗವಹಿಸಿದ್ದರು. ಬಸವಣ್ಣ, ಜಯದೇವ ಜಗದ್ಗುರು, ಅಕ್ಕಮಹಾದೇವಿ, ಅಲ್ಲಮಪ್ರಭು ಮುಂತಾದ ಶರಣರ ಚಿತ್ರಗಳನ್ನು ಬಿಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT