ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಚನಗಳ ಪಿತಾಮಹ ಫ.ಗು. ಹಳಕಟ್ಟಿ: ಗುರುಬಸವ ಸ್ವಾಮೀಜಿ

ಫ.ಗು. ಹಳಕಟ್ಟಿ ಸ್ಮರಣೆ, ವಚನಗಳ ಸಂರಕ್ಷಣಾ ದಿನಾಚರಣೆ
Published 2 ಜುಲೈ 2024, 14:04 IST
Last Updated 2 ಜುಲೈ 2024, 14:04 IST
ಅಕ್ಷರ ಗಾತ್ರ

ಚನ್ನಗಿರಿ: ‘12ನೇ ಬಸವಾದಿ ಶಿವಶರಣರು ರಚಿಸಿದ ಅಮೂಲ್ಯವಾದ ವಚನಗಳನ್ನು ಕಲ್ಯಾಣದ ಕ್ರಾಂತಿ ಸಮಯದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬಚ್ಚಿಡಲಾಗಿತ್ತು. 900 ವರ್ಷಗಳ ನಂತರ ಫ.ಗು. ಹಳಕಟ್ಟಿಯವರು ನಾಡಿನಾದ್ಯಂತ ಪ್ರವಾಸ ಮಾಡಿ ಶಿವಶರಣರು ರಚಿಸಿದ ವಚನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಮುದ್ರಿಸಿ ನಾಡಿನ ಜನರಿಗೆ ಪರಿಚಯಿಸಿದರು’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.

ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಪಾಂಡೋಮಟ್ಟಿ ವಿರಕ್ತ ಮಠದ ಸಹಯೋಗದಲ್ಲಿ ಮಂಗಳವಾರ ನಡೆದ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಸ್ಮರಣೆ ಹಾಗೂ ವಚನಗಳ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ ಮುದ್ರಿಸಿ, ಪುಸ್ತಕ ರೂಪದಲ್ಲಿ ಹೊರತರದಿದ್ದರೆ, 12ನೇ ಶತಮಾನದ ಶಿವಶರಣರು ರಚಿಸಿದ ವಚನಗಳು ನಾಡಿನ ಜನರಿಗೆ ಪರಿಚಯವಾಗುತ್ತಿರಲಿಲ್ಲ. ಹಳಕಟ್ಟಿಯವರು ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ, ಬಂದ ಹಣದಿಂದ ವಚನಗಳ ಸಂಗ್ರಹವನ್ನು ಪುಸ್ತಕ ರೂಪಕ್ಕೆ ತಂದ ಮಹಾನ್ ತ್ಯಾಗಿಯಾಗಿದ್ದಾರೆ. 26 ಸಾವಿರಕ್ಕಿಂತ ಹೆಚ್ಚು ವಚನಗಳನ್ನು ಅವರು ಸಂಗ್ರಹಿಸಿದ್ದರು’ ಎಂದರು.

‘ಹಳಕಟ್ಟಿಯವರು ವಚನಗಳನ್ನು ನಾಡಿಗೆ ಪರಿಚಯಿಸದೇ ಹೋಗಿದ್ದರೆ ಬಸವಣ್ಣ ಹಾಗೂ ಶಿವಶರಣರು ರಚಿಸಿದ ವಚನಗಳು ನಾಡಿನ ಜನರಿಗೆ ಗೊತ್ತಾಗುತ್ತಿರಲಿಲ್ಲ’ ಎಂದು ಸಿಪಿಐ ಸಂತೋಷ್ ಕುಮಾರ್ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು, ಕಾರ್ಯದರ್ಶಿ ಎಂ.ಎನ್. ಪುಷ್ಪಾವತಿ, ಗೌರವಾಧ್ಯಕ್ಷ ಎಂ.ಯು. ಚನ್ನಬಸಪ್ಪ, ಕಾರ್ಯದರ್ಶಿ ಕೆ.ಜಿ. ಶಿವಮೂರ್ತಿ, ಸಂತೇಬೆನ್ನೂರಿನ ವರ್ತಕ ಸಂಘದ ಅಧ್ಯಕ್ಷ ಸಿರಾಜ್ ಅಹಮದ್, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಜಿ. ಚಿನ್ನಸ್ವಾಮಿ, ಧನಂಜಯ್ ಉಪಸ್ಥಿತರಿದ್ದರು.

ನಿವೃತ್ತ ಪ್ರಾಂಶುಪಾಲ ಜಿ.ಬಿ. ಚಂದ್ರಶೇಖರಪ್ಪ ಉಪನ್ಯಾಸ ನೀಡಿದರು. ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT