ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ವೇಶ್ಯಾವಾಟಿಕೆ: ಮೂವರು ಮಹಿಳೆಯರ ರಕ್ಷಣೆ

Published 19 ಫೆಬ್ರುವರಿ 2024, 5:58 IST
Last Updated 19 ಫೆಬ್ರುವರಿ 2024, 5:58 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಪಿ.ಜೆ. ಬಡಾವಣೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಯುವತಿ ಸೇರಿ ಮೂವರನ್ನು ರಕ್ಷಿಸಿದ್ದಾರೆ.

ಉಮಾಪತಿ ಎಂಬುವವರಿಗೆ ಸೇರಿದ ಮನೆಯ ಕಟ್ಟಡಕ್ಕೆ ಹೊಂದಿಕೊಂಡಿರುವ ಬಾಡಿಗೆಯ ಮನೆಯೊಂದರಲ್ಲಿ ಹೆಣ್ಣು ಮಕ್ಕಳನ್ನು ಹಣದ ಆಮಿಷ ಒಡ್ಡಿ ಬೇರೆ ಕಡೆಯಿಂದ ಕರೆಯಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ಪೊಲೀಸರು ರಕ್ಷಿಸಿದ್ದಾರೆ.

ಮಾಹಿತಿ ಆಧರಿಸಿ ದಾವಣಗೆರೆ ಹಾಗೂ ಹರಪನಹಳ್ಳಿಯ ಮೂವರು ಮಹಿಳೆಯರು ಹಾಗೂ ಬೆಳಗಾವಿಯ ಒಬ್ಬರು ಯುವತಿಯನ್ನು ರಕ್ಷಿಸಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಹರಪನಹಳ್ಳಿ ತಾಲ್ಲೂಕಿನ ಗಂಗಿಬಾಯಿ ಎಂಬುವರ ವಿರುದ್ಧ ಇಲ್ಲಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಯಿ ಅಡ್ಡ ಬಂದು ಬೈಕ್‌ನಲ್ಲಿದ್ದ ಮಹಿಳೆ ಸಾವು

ದಾವಣಗೆರೆ: ಬೈಕ್‌ ಚಲಾಯಿಸುತ್ತಿದ್ದಾಗ ನಾಯಿ ಅಡ್ಡಬಂದಾಗ ಬೈಕ್ ಆಯತಪ್ಪಿ ಬಿದ್ದು ಮಹಿಳೆಯರು ಮೃತಪಟ್ಟ ತಾಲ್ಲೂಕಿನ ಘಟನೆ ಮತ್ತಿ ಕ್ಯಾಂಪ್ ಬಳಿ ನಡೆದಿದೆ.

ಚನ್ನಗಿರಿ ತಾಲ್ಲೂಕಿನ ಬಸವರಾಜಪುರದ ಹಾಗೂ ನಿಟುವಳ್ಳಿ ಸರ್ಕಲ್‌ನ ನಿವಾಸಿ ಸುಮಲತಾ (30) ಮೃತರು.

ಪತಿಯ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಾಯಿ ಅಡ್ಡ ಬಂದಿದ್ದು, ಹಿಂಬದಿ ಕುಳಿತಿದ್ದ ಸುಮಲತಾ ಅವರಿಗೆ ತೀವ್ರ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT