ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಹೊಸ ಬಸ್ ನಿಲ್ದಾಣ: ಹತ್ತಾರು ಸೌಲಭ್ಯ, ₹1ಕ್ಕೆ ಶುದ್ಧ ಕುಡಿಯುವ ನೀರು

Published : 7 ಅಕ್ಟೋಬರ್ 2024, 5:48 IST
Last Updated : 7 ಅಕ್ಟೋಬರ್ 2024, 5:48 IST
ಫಾಲೋ ಮಾಡಿ
Comments
ದಾವಣಗೆರೆಯ ನೂತನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕುಳಿತಿರುವ ಪ್ರಯಾಣಿಕರು
ದಾವಣಗೆರೆಯ ನೂತನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕುಳಿತಿರುವ ಪ್ರಯಾಣಿಕರು
ಬಸ್ ನಿಲ್ದಾಣದಲ್ಲಿನ ಶಾಪಿಂಗ್‌ ಮಾಲ್‌ ಹಾಗೂ 3 ಮಲ್ಟಿಪ್ಲೆಕ್ಸ್‌ ಆರಂಭಿಸಲು ಟೆಂಡರ್ ಕರೆಯಲಾಗಿದ್ದು ಯಾರೂ ಭಾಗವಹಿಸಿಲ್ಲ. ಮತ್ತೆ ಟೆಂಡರ್‌ ಕರೆಯಲಾಗುವುದು
ಸಿದ್ದೇಶ್ವರ ಎನ್. ಹೆಬ್ಬಾಳ್ ವಿಭಾಗೀಯ ನಿಯಂತ್ರಕ
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳಿವೆ. ಸಾರ್ವಜನಿಕರು ಮುಖ್ಯವಾಗಿ ಸ್ವಚ್ಛತೆಗೆ ಸಹಕರಿಸಬೇಕು. ಕುಂದುಕೊರೆತೆ ಸಲಹೆಗಳಿದ್ದರೆ ನೀಡಬಹುದು
ಸಿದ್ದೇಶ್ ಎಚ್.ಎಸ್. ಸಹಾಯಕ ಸಂಚಾರ ಅಧೀಕ್ಷಕ
ನೂತನ ಬಸ್ ನಿಲ್ದಾಣವು ‘ಪ್ರಯಾಣಿಕ ಸ್ನೇಹಿ’ಯಾಗಿದೆ‌‌. ಈ ಸೌಲಭ್ಯಗಳನ್ನು ಮುಂದೆಯೂ ಇರುವಂತೆ ನೋಡಿಕೊಳ್ಳಬೇಕು. ನಿರ್ವಹಣೆ ಹೇಗಿರುತ್ತೆ ಎಂಬುದು ಮುಖ್ಯವಾಗಿದೆ
ರವಿ ಬಾಣಾವರ ಪ್ರಯಾಣಿಕ
ನಿಲ್ದಾಣದಲ್ಲಿನ ಆಟೊ ಸ್ಟ್ಯಾಂಡ್‌ ಚಿಕ್ಕದಾಯಿತು. 40 ರಿಂದ 50 ಆಟೊಗಳನ್ನು ನಿಲ್ಲಿಸುವಷ್ಟಾದರೂ ಜಾಗ ಇರಬೇಕಿತ್ತು. ರಸ್ತೆ ಪಕ್ಕದಲ್ಲೇ ಹೆಚ್ಚಿನ ಆಟೊ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ
ಶಂಕರ್ ಡಿ. ಆಟೊ ಚಾಲಕ
108 ಸಿ.ಸಿ. ಟಿ.ವಿ ಕ್ಯಾಮೆರಾ ಕಣ್ಗಾವಲು 
ಬಸ್ ನಿಲ್ದಾಣದ ಮೂಲೆ ಮೂಲೆಯಲ್ಲೂ ಸಿ.ಸಿ. ಟಿ.ವಿ ಕ್ಯಾಮೆರಾಗಳ ಕಣ್ಗಾವಲಿದೆ. ನಿಲ್ದಾಣದಲ್ಲಿ ಒಟ್ಟು 108 ಅತ್ಯಾಧುನಿಕ ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಿ.ಸಿ ಟಿವಿಗಳ ನಿರ್ವಹಣೆ ಹಾಗೂ ಕಣ್ಗಾವಲಿಗೆ ಕಂಟ್ರೋಲ್ ರೂಂ ಇದ್ದು ಇಲ್ಲಿ ಕುಳಿತುಕೊಂಡೇ ನಿಲ್ದಾಣದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಗಮನಿಸಬಹುದಾಗಿದೆ. ಇನ್ನು ಪ್ರಯಾಣಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಎಲ್‌ಇಡಿ ಪರದೆಗಳನ್ನೂ ಅಳವಡಿಸಲಾಗಿದೆ. ಯಾವ ಬಸ್ ಯಾವ ಅಂಕಣದಲ್ಲಿದೆ ಯಾವ ಮಾರ್ಗದಿಂದ? ಎಲ್ಲಿಗೆ? ಯಾವಾಗ ಹೋಗುತ್ತದೆ ಎಂಬುದು ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಮಾಹಿತಿಯನ್ನು ಇವುಗಳಲ್ಲಿ ಪ್ರದರ್ಶಿಸಲಾಗುತ್ತಿದೆ.
ನಗರ ಸಾರಿಗೆ ಬಸ್‌ಗಳ ಪ್ರವೇಶ
ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ ನಗರ ಸಾರಿಗೆ ಬಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿಲ್ದಾಣದ ಪ್ರವೇಶ ದ್ವಾರದ ಬಳಿಯ ಉದ್ಯಾನದ ಪಕ್ಕದಲ್ಲೇ ನಗರ ಸಾರಿಗೆ ಬಸ್‌ಗಳು ನಿಲ್ಲುತ್ತವೆ. ಇದರಿಂದ ಪ್ರಯಾಣಿಕರು ಬಸ್ ನಿಲ್ದಾಣದಿಂದ ಹೊರಹೋಗಲು ನಡೆದುಕೊಂಡು ಹೋಗುವುದು ಇಲ್ಲವೇ ಆಟೊಗಳಿಗೆ ದುಬಾರಿ ಹಣ ಪಾವತಿಸಿ ಹೋಗುವುದು ತಪ್ಪುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ರಸ್ತೆ ದಾಟುವಾಗ ಸಂಭವಿಸಬಹುದಾದ ಅಪಘಾತಗಳನ್ನು ತಡೆದಂತಾಗಿದೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಬಸ್ ನಿಲ್ದಾಣದಿಂದಲೇ ನಗರ ಸಾರಿಗೆ ಮೂಲಕ ಶಾಲಾ ಕಾಲೇಜುಗಳಿಗೆ ತೆರಳಲು ಅನುಕೂಲವಾಗಿದೆ.
ಖಾಸಗಿ ಬಸ್ ನಿಲ್ದಾಣ ಉದ್ಘಾಟನೆ ಇಂದು
ಹೊಸ ಬಸ್‌ ನಿಲ್ದಾಣದ ಸಮೀಪ ಹೊಸದಾಗಿ ನಿರ್ಮಾಣವಾಗಿರುವ ಶಾಮನೂರು ಶಿವಶಂಕರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ಕಾರ್ಯಾರಂಭ ಸಮಾರಂಭವು ಅಕ್ಟೋಬರ್‌ 7ರಂದು ಬೆಳಿಗ್ಗೆ 10ಕ್ಕೆ ನಡೆಯಲಿದ್ದು ವೇದಿಕೆ ಕಾರ್ಯಕ್ರಮವು ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮೇಯರ್ ಕೆ.ಚಮನ್‌ಸಾಬ್ ಉಪ ಮೇಯರ್ ಸೋಗಿ ಶಾಂತಕುಮಾರ್ ಧೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಮಾಜಿ ಮೇಯರ್ ಎಸ್.ಟಿ. ವಿರೇಶ್ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಪಾಲಿಕೆ ಆಯುಕ್ತೆ ರೇಣುಕಾ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT