ಆಸ್ತಿಗಳ ಬಗ್ಗೆ ಇಲ್ಲ ಮಾಹಿತಿ
ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿ ಬದಿಯ 6 ಮೀಟರ್ ಪರಿಮಿತಿಯಲ್ಲಿ ಎಷ್ಟು ಆಸ್ತಿಗಳಿವೆ ಎಂಬ ಅಂದಾಜು ಇಲ್ಲ. ರಸ್ತೆಯ ಅಂಚು ಗುರುತು ಮಾಡುವುದು ಇನ್ನೂ ಬಾಕಿ ಇರುವ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳು ಕೂಡ ಲೋಕೋಪಯೋಗಿ ಇಲಾಖೆಯನ್ನು ಸಂಪರ್ಕಿಸುತ್ತಿವೆ. ಜಿಲ್ಲಾ ಮುಖ್ಯ ರಸ್ತೆಗಳ ಪೈಕಿ ಕೆಲವು ವಿಸ್ತರಣೆಯಾಗಿವೆ. ಹಲವು ರಸ್ತೆಗಳು ವಿಸ್ತರಣೆಗೆ ಬಾಕಿ ಇವೆ. ವಿಸ್ತರಣೆಯಾಗದ ರಸ್ತೆಯ ಬದಿಯಲ್ಲಿರುವ ನಿವಾಸಿಗಳಲ್ಲಿ ಪರಿಷ್ಕೃತ ಮಾರ್ಗಸೂಚಿ ಹೆಚ್ಚಿನ ಆತಂಕ ಮೂಡಿಸಿದೆ.