ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಸ್ವೆಹಳ್ಳಿ: ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ

Published 5 ಜೂನ್ 2024, 15:51 IST
Last Updated 5 ಜೂನ್ 2024, 15:51 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಜೋರು ಮಳೆಯಾಗಿದೆ. ಮಧ್ಯಾಹ್ನ ಮಳೆ ಆರಂಭಗೊಂಡಿತು.

ವಾರದಿಂದ ಮಳೆ ಇಲ್ಲದ ಕಾರಣ ಜನರು ತೆಂಗು, ಅಡಿಕೆ, ಬಾಳೆ, ಎಲೆ ಬಳ್ಳಿ ತೋಟಗಳಿಗೆ ನೀರು ಬಿಡಲು ತಯಾರಿ ನಡೆಸಿದ್ದರು. ಮಂಗಳವಾರ ಹೋಬಳಿಯ ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿತ್ತು. ಬುಧವಾರ ಸುತ್ತಮುತ್ತಲ ಗ್ರಾಮಗಳಲ್ಲಿ ಹದ ಮಳೆ ಬಂದಿದ್ದು, ಇಳೆಯನ್ನು ತಂಪುಗೊಳಿಸಿದೆ ಎನ್ನುತ್ತಾರೆ ರೈತ ಬಸವರಾಜಪ್ಪ.

‘ಹೊನ್ನಾಳಿ ತಾಲ್ಲೂಕಿನ ಗಡಿಭಾಗವಾದ ಚನ್ನೇನಹಳ್ಳಿ, ಭೈರನಹಳ್ಳಿ, ಕರಡಿಕ್ಯಾಂಪ್ ಗ್ರಾಮಗಳಲ್ಲಿ ಮಳೆ ಇಲ್ಲ. ಬುಧವಾರ ಕ್ಯಾಸಿನಕೆರೆ, ಚಿಲಾಪುರದಲ್ಲಿ ಸಾಧಾರಣ ಮಳೆಯಾಗಿದೆ. ನಮಗೆ ಮಳೆ ಬೇಕು ತೋಟಗಳಿಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸುತ್ತಿದ್ದೇವೆ’ ಎಂದು ಭೈರನಹಳ್ಳಿಯ ರಾಜಶೇಖರ್ ತಿಳಿಸಿದರು.

ಹೊಸಹಳ್ಳಿಯ ತಗ್ಗಿನ ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದೆ. ಜನರು ಸಹಾಸದೊಂದಿಗೆ ನೀರು ಹೊರ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT