ನ್ಯಾಮತಿ: ಕಳೆದ ಒಂದು ವಾರದಿಂದ ಅವಳಿ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಅತಿವೃಷ್ಟಿಪೀಡಿತ ತಾಲ್ಲೂಕು ಎಂದು ಘೋಷಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುವುದಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಭರವಸೆ ನೀಡಿದರು.

ತಾಲ್ಲೂಕಿನ ಸೋಗಿಲು, ಚಟ್ನಳ್ಳಿ, ಗಂಜೇನಹಳ್ಳಿ, ಫಲವನಹಳ್ಳಿ, ಕುಂಕುವಾ, ಒಡೆಯರಹತ್ತೂರು, ಗಂಗನಕೋಟೆ, ಕಂಕನಹಳ್ಳಿ, ಕೊಡಚಗೊಂಡನಹಳ್ಳಿ, ದಾನಿಹಳ್ಳಿ, ಆರುಂಡಿ, ರಾಮೇಶ್ವರ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ ಮಳೆಯಿಂದಾದ ಹಾನಿಯನ್ನು ಪರಿಶೀಲಿಸಿ ಮಾತನಾಡಿದರು.

ತಾಲ್ಲೂಕಿನ ಹಿರೇಹಳ್ಳ ತುಂಬಿರುವುದರಿಂದ ಗಂಜೇನಹಳ್ಳಿ-ಸಾಲಬಾಳು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸ್ಥಳ ಪರಿಶೀಲನೆ ನಡೆಸಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು ಅಂದಾಜುವೆಚ್ಚದ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಉಪತಹಶೀಲ್ದಾರ್ ಎನ್. ನಾಗರಾಜ, ಆರ್‌ಐ ಸುಧೀರ್, ಕೆಎಸ್‌ಡಿಎಲ್ ನಿರ್ದೇಶಕ ಶಿವು ಹುಡೇದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.