ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಜನೇಯಸ್ವಾಮಿ, ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ

Last Updated 31 ಮಾರ್ಚ್ 2023, 7:09 IST
ಅಕ್ಷರ ಗಾತ್ರ

ಕುಳಗಟ್ಟೆ (ದಾವಣಗೆರೆ): ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ ಗ್ರಾಮದ ಆಂಜನೇಯಸ್ವಾಮಿ ಹಾಗೂ ಕಲ್ಯಾಣ ವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು.

ಸಂಪ್ರದಾಯದಂತೆ ಶ್ರೀರಾಮ ನವಮಿಯಂದು ಸಂಜೆ ಧಾರ್ಮಿಕ ಪೂಜಾ ಕಾರ್ಯಗಳ ನಂತರ ರಥೋತ್ಸವ ನಡೆಸಲಾಯಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಅಲಂಕೃತ ಪಲ್ಲಕ್ಕಿಯಲ್ಲಿ ದೇವರ ಉತ್ಸವಮೂರ್ತಿ ಪೂಜೆಗೆ ಹೋಗಿ ರಥಬೀದಿಗೆ ಬರುತ್ತಿ ದ್ದಂತೆ ಪುರೋಹಿತರು ರಥ ಶಾಂತಿ ಪೂಜೆ ನೆರವೇರಿಸಿದರು. ಬ್ರಹ್ಮರಥವನ್ನು ವಿವಿಧ ಪುಷ್ಪಗಳು, ಧ್ವಜ-ಕಲಶಗಳಿಂದ ಅಲಂಕರಿಸಲಾಗಿತ್ತು.

ರಥಬೀದಿಯಲ್ಲಿದ್ದ ಸಾವಿರಾರು ಭಕ್ತರು, ‘ಆಂಜನೇಯ ನಿನ್ನ ಪಾದಾರವಿಂದಾ ಗೋವಿಂದಾ..‌ ಲಕ್ಷ್ಮಿರಮಣ ಗೋವಿಂದಾ...’ ಎಂದು ಜಯಘೋಷ ಹಾಕುತ್ತಾ ರಥವನ್ನು ಪಾದಗಟ್ಟೆಯವರೆಗೆ ಎಳೆದರು.

ಬಾಳೆಹಣ್ಣು, ಮೆಣಸು, ಮಂಡಕ್ಕಿಯನ್ನು ಭಕ್ತರು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಗ್ರಾಮದ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT