ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ದಿನಗಳೊಳಗೆ ಜನನ–ಮರಣ ನೋಂದಾಯಿಸಿ

‘ಇ-ಜನ್ಮ’ ತಂತ್ರಾಂಶ ನಿರ್ವಹಣೆ ಕಾರ್ಯಾಗಾರದಲ್ಲಿ ಸಲಹೆ
Last Updated 11 ನವೆಂಬರ್ 2020, 16:10 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾವಾರು ಜನನ ಪ್ರಮಾಣವನ್ನು ಅಂದಾಜಿಸಲು ಹಾಗೂ ನವಜಾತ ಶಿಶು ಹಾಗೂ ತಾಯಿಯ ಯೋಗಕ್ಷೇಮ, ರೋಗ ನಿರೋಧಕ ಚುಚ್ಚುಮದ್ದು ಕಾರ್ಯಕ್ರಮಗಳಿಗೆ‘ಇ-ಜನ್ಮ’ ನೋಂದಣಿ ಅವಶ್ಯಕ ಎಂದುಹೆಚ್ಚುವರಿ ಜಿಲ್ಲಾ ಜನನ-ಮರಣ ನೋಂದಣಾಧಿಕಾರಿ ವೈ.ಎಂ.ರಾಜೇಶ್ವರಿ ಹೇಳಿದರು.

ಜನನ-ಮರಣ ನೋಂದಣಿ ನಿಯಮಗಳು ಹಾಗೂ ‘ಇ-ಜನ್ಮ’ ತಂತ್ರಾಂಶ ನಿರ್ವಹಣೆ ಕುರಿತು ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ವಿವಾಹ ವಯಸ್ಸಿನ ಅಧ್ಯಯನ, ಲಿಂಗಾನುಪಾತ ಅಂದಾಜು ಹಾಗೂ ಇನ್ನಿತರೆ ಜನಗಣತಿಯ ಪ್ರಮುಖ ಅಂಕಿ ಅಂಶಗಳನ್ನು ಪಡೆಯಲು ಹಾಗೂ ಯೋಜನೆಗಳನ್ನು ರೂಪಿಸಲು ನೋಂದಣಿ ಕಾರ್ಯ ಅವಶ್ಯಕ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 928 ಜನನ-ಮರಣ ನೋಂದಣಿ ಹಾಗೂ 114 ಉಪನೋಂದಣಿ ಘಟಕಗಳು ಸೇರಿ ಒಟ್ಟಾಗಿ 1,042 ಜನನ-ಮರಣ ನೋಂದಣಿ ಘಟಕಗಳಿವೆ. ಜನನ-ಮರಣ ಘಟನೆಗಳು ಇ-ಜನ್ಮ ತಂತ್ರಾಂಶದಲ್ಲಿ ಯಶಸ್ವಿಯಾಗಿ ನೋಂದಣಿಯಾಗುತ್ತಿದ್ದು, ಜನರಿಗೆ ಸಕಾಲದಲ್ಲಿ ಪ್ರಮಾಣ ಪತ್ರಗಳು ದೊರೆಯುತ್ತಿರುವುದು ಈ ತಂತ್ರಾಂಶದ ವಿಶೇಷ’ ಎಂದರು.

‘ಆರೋಗ್ಯ ಸಂಸ್ಥೆಗಳು ಜನನ-ಮರಣ ಘಟನೆಗಳನ್ನು ತಡ ಮಾಡದೇ ಕಡ್ಡಾಯವಾಗಿ 21 ದಿನಗಳೊಳಗೆ ನೋಂದಣಿ ಮಾಡಬೇಕು. ಕಾನೂನು ವಿಭಾಗದ ದಾಖಲೆಗಳನ್ನು ತಮ್ಮ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳದೇ ಜನನ-ಮರಣ ನೋಂದಣಾಧಿಕಾರಿಗೆ ಸಲ್ಲಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹಾಗೂ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಕಾರ್ಯಕ್ರಮ ಉದ್ಘಾಟಿಸಿದರು.‘ಜನನ-ಮರಣ ನೋಂದಣಿ ನಿಯಮಗಳು’ ಹಾಗೂ ‘ಇ-ಜನ್ಮ ತಂತ್ರಾಂಶ ನಿರ್ವಹಣಿ’ ಕುರಿತುಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯ್ ಬಡಿಗೇರ್ ತರಬೇತಿ ನೀಡಿದರು.

ಮಹಾನಗರಪಾಲಿಕೆಯ ಜನನ-ಮರಣ ನೋಂದಣಾಧಿಕಾರಿ ಕೆ.ಎಲ್‌. ಧರಣೇಶ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT