ಸಂತೇಬೆನ್ನೂರು: ಇಲ್ಲಿನ ನಲ್ಲೂರು ಗ್ರಾಮದ ಸೈಯದ್ ನೂರ್ ಎಂಬುವರ ನಾಟಿ ಕೋಳಿಯೊಂದು ಸೋಮವಾರ ನೀಲಿ ಮೊಟ್ಟೆ ಇಡುವ ಮೂಲಕ ಅಚ್ಚರಿ ಮೂಡಿಸಿದೆ. ನಿತ್ಯವೂ ಈ ನಾಟಿ ಕೋಳಿ ಬಿಳಿ ಮೊಟ್ಟೆಯನ್ನೇ ಇಡುತ್ತಿತ್ತು.

‘ಉಪಕಸುಬಾಗಿ ಹತ್ತು ನಾಟಿ ಕೋಳಿಗಳನ್ನು ಸಾಕಿದ್ದೇನೆ. ನಿತ್ಯ ಅಕ್ಕಿ, ರಾಗಿ ಧಾನ್ಯಗಳನ್ನು ಆಹಾರವಾಗಿ ನೀಡುತ್ತೇನೆ. ಇದೇ ಮೊದಲು ಬಾರಿ ನಾಟಿ ಕೋಳಿಯೊಂದು ನೀಲಿ ಮೊಟ್ಟೆ ಇಟ್ಟಿದೆ’ ಎಂದು ಮಾಲೀಕ ಸೈಯದ್ ನೂರ್ ಹೇಳಿದರು.

‘ನಾಟಿಕೋಳಿಗಳು ತಿಳಿ ಹಳದಿ ಬಣ್ಣ ಹಾಗೂ ಹಸಿರು ಬಣ್ಣದ ಮೊಟ್ಟೆಗಳನ್ನು ಅಪರೂಪಕ್ಕೆ ಇಡುತ್ತವೆ. ನೀಲಿ ಬಣ್ಣದ ಮೊಟ್ಟೆಯನ್ನು ಇದೇ ಮೊದಲ ಬಾರಿ ಕೇಳಿದ್ದೇನೆ. ಮೆದೋಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣ ದ್ರವ್ಯದ ಕಾರಣಕ್ಕೆ ಮೊಟ್ಟೆಗೆ ನೀಲಿ ಬಣ್ಣ ಬಂದಿರುವ ಸಾಧ್ಯತೆ ಇದೆ. ಹೊರಕವಚ ಮಾತ್ರ ನೀಲಿಯಿಂದ ಕೂಡಿರುತ್ತದೆ. ಉಳಿದಂತೆ ಒಳಭಾಗದಲ್ಲಿ ಹಳದಿ, ಬಿಳಿ ಭಾಗವೇ ಇರುತ್ತದೆ. ಇನ್ನೂ ನಾಲ್ಕೈದು ದಿನ ನೀಲಿ ಮೊಟ್ಟೆಯನ್ನೇ ಇಟ್ಟರೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಶೋಕ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.