ಬಸವಾಪಟ್ಟಣ ಸಮೀಪದ ಕಣಿವೆಬಿಳಚಿಯಲ್ಲಿ ನಿಗಮದ ಮನೆಗಾಗಿ ಎದುರು ನೋಡುತ್ತಿರುವ ಪೂಜಾ ಸ್ವಾಮಿ
ವಸತಿ ಸಚಿವರಿಗೆ ಮನವಿ
‘ಕಣಿವೆಬಿಳಚಿಯ ಪರಿಶಿಷ್ಟ ಜನಾಂಗದ ಇಬ್ಬರು ಮಹಿಳೆಯರ ಮನೆಗಳ ಸ್ಥಿತಿಯನ್ನು ನೋಡಿದ್ದೇನೆ. ಕಳೆದ ವರ್ಷ ನಮ್ಮ ಕ್ಷೇತ್ರಕ್ಕೆ ಒಂದು ಮನೆಯೂ ಮಂಜೂರಾಗಿಲ್ಲ. ಆದ್ದರಿಂದ ಕೆಲ ದಿನಗಳ ಹಿಂದೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿರುವ ವಸತಿ ರಹಿತರಿಗೆ ಮನೆಗಳನ್ನು ಮಂಜೂರು ಮಾಡುವಂತೆ ಲಿಖಿತ ಮನವಿ ಸಲ್ಲಿಸಿದ್ದೇನೆ. ಅವರು ಆಶ್ವಾಸನೆ ನೀಡಿದ್ದಾರೆ. ಈ ಬಗ್ಗೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ’ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.