ದಾವಣಗೆರೆ: ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಮಂಗಳವಾರ ರಾತ್ರಿ ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಎಂಎಲ್ಸಿಗಳು ಬರೋದು ಬೇಡ ಎಂಬ ಸೂಚನೆ ಹೋಗಿದ್ದರಿಂದ ಮೂವರು ಎಂಎಲ್ಸಿಗಳು ಗೈರಾಗಿದ್ದಾರೆ. ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಕೂಡ ಹಾಜರಾಗಿಲ್ಲ.

ಜೆಡಿಎಸ್ ಸದಸ್ಯೆ ನೂರ್ ಜಹಾನ್ ಬಿ., ಕಳೆದ ಬಾರಿ ಬಿಜೆಪಿ ಬೆಂಬಲಿಸಿದ್ದ ಪಕ್ಷೇತರ ಸದಸ್ಯೆ ಜಯಮ್ಮ ಗೋಪಿನಾಯ್ಕ್ ಕೂಡಾ ಗೈರಾಗಿದ್ದಾರೆ.

ಹೇಗಾದರೂ ಆಡಳಿತ ಹಿಡಿಯಲೇಬೇಕು ಎಂದು ಪ್ರಯತ್ನ ಪಡುತ್ತಿದ್ದ ಕಾಂಗ್ರೆಸ್ ತನ್ನ ಮೇಯರ್ ಅಭ್ಯರ್ಥಿ ದೇವರಮನಿ ಶಿವಕುಮಾರ್ ಅವರೇ ಬಿಜೆಪಿಗೆ ಹೋಗುತ್ತಿದ್ದಂತೆ ಪ್ರಯತ್ನ ಕೈ ಚೆಲ್ಲಿತು.

ಇದನ್ನೂ ಓದಿ.. ದಾವಣಗೆರೆ ಮೇಯರ್ ಆಗಿ ಎಸ್.ಟಿ. ವೀರೇಶ್ ಆಯ್ಕೆ

ಬಿಜೆಪಿಯಿಂದ ಸಚಿವ ಆರ್ ಶಂಕರ್ , ಸಂಸದ ಜಿ ಎಂ ಸಿದ್ದೇಶ್ವರ್ , ಚಿದಾನಂದಗೌಡ ಸೇರಿದಂತೆ ಬಿಜೆಪಿಯ 29 ಸದಸ್ಯರು ಭಾಗಿಯಾಗಿದ್ದಾರೆ.

ಎಂ ಎಲ್ ಸಿ ಗಳಾದ ಕೆಸಿ ಕೊಂಡಯ್ಯ, ರಘು ಆಚಾರ್ , ಯುಬಿ ವೆಂಕಟೇಶ್ ಬರಲಿಲ್ಲ. ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ ಮಂಗಳವಾರವೇ ಬಂದಿದ್ದರಿಂದ ಹಾಜರಾದರು. ಪಾಲಿಕೆ 22 ಸದಸ್ಯರು ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.