ದಾವಣಗೆರೆ: ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಮಾಡಬಹುದಾದಸೋನೋ ಮ್ಯಾಮೋಗ್ರಫಿ ಘಟಕವನ್ನು ನಗರದ ಸುಕ್ಷೇಮ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ನಿಂದ ಸ್ಥಾಪಿಸಲಾಗುತ್ತಿದೆ.

ಅಂತರರಾಷ್ಟ್ರೀಯ ರೋಟರಿ ಫೌಂಡೇಶನ್ ಹಾಗೂ ರೋಟರಿ ಜಿಲ್ಲೆಗಳಾದ 1385, 3150 ಮತ್ತು 3160 ಇವರ ಅನುದಾನದಲ್ಲಿ ಇದನ್ನು ಸ್ಥಾಪಿಸಲಾಗುತ್ತಿದ್ದು, ಶೀಘ್ರವೇ ಇದು ಕಾರ್ಯಾರಂಭ ಮಾಡಲಿದೆ ಎಂದು ಗ್ಲೋಬಲ್ ಗ್ರಾಂಟ್ ಕಮಿಟಿ ಛೇರ್ಮನ್ ಪಿ.ಬಿ. ಪ್ರಕಾಶ್ ತಿಳಿಸಿದ್ದಾರೆ.

‘ಸೋನೋ ಮ್ಯಾಮೋಗ್ರಫಿ ಘಟಕವನ್ನು ಜೂನ್ 24ರಂದು ಬೆಳಿಗ್ಗೆ 9ಕ್ಕೆ ರೋಟರಿ 3160 ಜಿಲ್ಲೆಯ ಗವರ್ನರ್ ಬಿ.ಚೆನ್ನಪ್ಪ ರೆಡ್ಡಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಲ್. ನಾಗರಾಜ್ ಉದ್ಘಾಟಿಸಲಿದ್ದಾರೆ.

ರೋಟರಿ ಕ್ಲಬ್ ದಾವಣಗೆರೆಯ ಅಧ್ಯಕ್ಷ ಆರ್.ಟಿ. ಮೃತ್ಯಂಜಯ ಅಧ್ಯಕ್ಷತೆಯಲ್ಲಿ ಸುಕ್ಷೇಮ ಆಸ್ಪತ್ರೆಯ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ರೋಟರಿ ಗವರ್ನರ್ ತಿರುಪತಿ ನಾಯ್ಡು, ರೋಟರಿ ಗ್ಲೋಬಲ್ ಗ್ರ್ಯಾಂಟ್ ಕಮಿಟಿಯ ಸದಸ್ಯರಾದ ಡಾ.ವಿ.ಎಲ್. ಜಯಸಿಂಹ, ಕೆ. ಮಧುಪ್ರಸಾದ್, ಹಿರಿಯ ಎಸ್.ಕೆ. ವೀರಣ್ಣ, ಆರ.ಎಸ್. ನಾರಾಯಣಸ್ವಾಮಿ, ನಯನ್ ಪಾಟೀಲ್, ಎ.ಜಿ. ಚಂದ್ರಾಚಾರ್, ರೋಟರಿ ಕಾರ್ಯದರ್ಶಿ ಅಂದನೂರು ಆನಂದ್, ಖಜಾಂಚಿ ಜಗದೀಶ್ ಬೇತೂರು,ಸುಕ್ಷೇಮ ಆಸ್ಪತ್ರೆಯ ಡಾ. ಶ್ರೀಶೈಲ ಬ್ಯಾಡಗಿ ಹಾಗೂ ಕ್ಯಾನ್ಸರ್ ಸರ್ಜನ್ ಡಾ. ಸುನೀಲ್ ಬ್ಯಾಡಗಿ ಪಾಲ್ಗೊಳ್ಳುವರು ಎಂದು ಗ್ರಾಂಟ್ ಕಮಿಟಿಯ ಛೇರ್ಮನ್ ಪಿ.ಬಿ. ಪ್ರಕಾಶ್ ತಿಳಿಸಿದ್ದಾರೆ.

‘ರೋಟರಿ ಕ್ಲಬ್ ದಾವಣಗೆರೆ ಆಶ್ರಯದಲ್ಲಿ ಸುಕ್ಷೇಮ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ನಿಯತಕಾಲಿಕವಾಗಿ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.