ಸೋಮವಾರ, ಸೆಪ್ಟೆಂಬರ್ 27, 2021
28 °C
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌

ಬೆರೆಯಲು ಕಲಿಸುವ ಬೇಸಿಗೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಯಸ್ಸಿನ ಭೇದವಿಲ್ಲದೇ ಬೇರೆ ಬೇರೆ ಮನೆಗಳಿಂದ ಮಕ್ಕಳು ಬೆರೆಯುವಂತೆ ಬೇಸಿಗೆ ಶಿಬಿರಗಳು ಮಾಡುತ್ತವೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಹೇಳಿದರು.

ಭಾರತ ಸೇವಾದಳ, ಜೈ ಭಾರತ್‌ ಟ್ರಸ್ಟ್‌, ಫ್ಲೈಯಿಂಗ್‌ ಬರ್ಡ್ಸ್‌, ಡ್ಯಾನ್ಸ್‌ ಇನ್‌ಸ್ಟಿಟ್ಯೂಟ್‌ ಸಹಯೋಗದಲ್ಲಿ ಭಾರತ ಸೇವಾದಳದ ಸಾಂಸ್ಕೃತಿಕ ಭವನದಲ್ಲಿ ಒಂದು ತಿಂಗಳು ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.

ಮಕ್ಕಳು ಮನೆಯಲ್ಲಿ ಇದ್ದರೆ ಹೆತ್ತವರ ಮೊಬೈಲ್‌ಗಳಲ್ಲಿ ಮುಳುಗಿರುತ್ತಾರೆ. ಈ ಶಿಬಿರ ಮೊಬೈಲ್‌ನಿಂದ ಒಂದು ತಿಂಗಳ ಕಾಲ ದೂರ ಮಾಡಿದೆ. ವಾಸ್ತವ ಜಗತ್ತು ಹೇಗಿರುತ್ತದೆ ಎಂಬುದನ್ನು ಕಲಿಯಲು ಶಿಬಿರ ಸಹಾಯಕವಾಗುತ್ತದೆ ಎಂದು ತಿಳಿಸಿದರು.

‘ದೇಶಭಕ್ತಿಯನ್ನು ಹುಟ್ಟುಹಾಕಲು ಡಾ.ನಾ.ಸು. ಹರ್ಡೇಕರ್‌ ಅವರು ಸೇವಾದಳವನ್ನು ಹುಟ್ಟು ಹಾಕಿದರು. ಈಗಲೂ ನಾವು ಯಾರದ್ದೋ ಗುಲಾಮರಾಗುವುದನ್ನು ತಪ್ಪಿಸಲು, ದೇಶಪ್ರೇಮಿಗಳಾಗಿ ಉಳಿಯಲು ಸೇವಾದಳ ಸಹಕಾರಿಯಾಗಿದೆ’ ಎಂದರು.

‘ಜಿಲ್ಲಾ ಪಂಚಾಯಿತಿಯಿಂದ ಸೇವಾದಳಕ್ಕೆ ಕಾನೂನಿನ ಚೌಕಟ್ಟಿನೊಳಗೆ ನೆರವು ನೀಡಲು ಬದ್ಧಳಿದ್ದೇನೆ’ ಎಂದು ಭರವಸೆ ನೀಡಿದರು.

ಭಾರತ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್‌. ಜಯದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಟಿ. ನಾಗರಾಜ್‌ ಪ್ರಶಸ್ತಿ ಪತ್ರ ವಿತರಿಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ. ಪರಶುರಾಮ್‌ ಖಟಾವಕರ್‌, ಜೈಭಾರತ್‌ ಟ್ರಸ್ಟ್‌ ಅಧ್ಯಕ್ಷೆ ಶೈಲಜಾ ಪರಶುರಾಮ್‌ ಖಟಾವಕರ್, ಕೆ.ಪಿ. ಶ್ರೀಕಾಂತ್‌ ಉಪಸ್ಥಿತರಿದ್ದರು.

ಸೇವಾದಳದ ಜಿಲ್ಲಾ ಸಂಘಟಕ ಎಂ. ಅಣ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳಾದ ಸಂಜೀವ, ಹರ್ಷ ಅನಿಸಿಕೆ ವ್ಯಕ್ತಪಡಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು