ಗುರುವಾರ , ಜೂನ್ 30, 2022
23 °C

ದಾವಣಗೆರೆ: ಶತಕದ ಗಡಿ ದಾಟಿದ ಪೆಟ್ರೋಲ್ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ದಾವಣಗೆರೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 100.17ಕ್ಕೆ ಏರಿಕೆ ಕಂಡರೆ, ಡೀಸೆಲ್ ದರ ಒಂದು ಲೀಟರ್‌ಗೆ ₹ 92.83 ಆಗಿದೆ.

ಕಳೆದ ತಿಂಗಳು ಇದೇ ಸಮಯದಲ್ಲಿ ಪೆಟ್ರೋಲ್ ದರ ₹ 95.99 ಇದ್ದರೆ ಡೀಸೆಲ್ ದರ ₹88.06 ಇತ್ತು. ಆ ಮೂಲಕ ಒಂದು ತಿಂಗಳಲ್ಲಿ ಪೆಟ್ರೋಲ್ ₹ 4.18 ಹೆಚ್ಚಾದರೆ, ಡೀಸೆಲ್ ದರ ₹ 4.77 ಏರಿಕೆ ಕಂಡಿದೆ.

ಮೂರು ದಿವಸ ನಿರಂತರ ಏರಿಕೆ: ಮೇ 4ರಿಂದ 6ರವರೆಗೆ ಮೂರು ದಿವಸ ಇಂಧನ ದರ ನಿರಂತರವಾಗಿ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ 29 ಪೈಸೆ, 18 ಪೈಸೆ, 24 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ದರ ಒಂದು ಲೀಟರ್‌ಗೆ ಕ್ರಮವಾಗಿ 32, 20 ಹಾಗೂ 30 ಪೈಸೆಗಳಿಗೆ ಏರಿಕೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು