ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಮಹಿಳೆಯರು ವರ ಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಿದರು.
ಮಹಿಳೆಯರು ಬೆಳಿಗ್ಗಿನಿಂದ ಉಪವಾಸವಿದ್ದು, ಕಲಶವನ್ನು ಪ್ರತಿಷ್ಠಾಪಿಸಿ, ಅದನ್ನು ಹೂ, ಆಭರಣ ಹಾಗೂ ಹೊಸ ಸೀರೆಯಿಂದ ಅಲಂಕಾರ ಮಾಡುತ್ತಾರೆ. ಪೂಜೆಯನ್ನು ಸಲ್ಲಿಸಿ, ಆರತಿ ಬೆಳಗಿ, ನೈವೇದ್ಯ ಮಾಡುತ್ತಾರೆ.
ಪೂಜೆಯ ನಂತರ ಮಹಿಳೆಯರಿಗೆ ಕುಂಕುಮ, ಅರಿಶಿನದೊಂದಿಗೆ ಬಾಗಿನ ಕೊಡುತ್ತಾರೆ. ಹೀಗೇ ಮಾಡುವುದರಿಂದ ಮನೆಯಗಳಲ್ಲಿ ಸಂಪತ್ತು, ಸಂತಾನ, ಸೌಭಾಗ್ಯ, ಸಮೃದ್ಧಿ ಸಿಗುತ್ತದೆ ಎಂಬ ನಂಬಿಕೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ.