ಭಾನುವಾರ, ಡಿಸೆಂಬರ್ 4, 2022
21 °C

ಸಾಸ್ವೆಹಳ್ಳಿ: ಸಂಭ್ರಮದ ವಿಜಯದಶಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಸ್ವೆಹಳ್ಳಿ: ಹೋಬಳಿಯ ಹನುಮನಹಳ್ಳಿ, ಸಾಸ್ವೆಹಳ್ಳಿ, ಐನೂರು, ಕಮ್ಮಾರಗಟ್ಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಗ್ರಾಮ ದೇವರಿಗೆ ವಿಶೇಷ ಪೂಜೆ ಮಾಡಿ ವಿಜಯದಶಮಿ ಆಚರಿಸಲಾಯಿತು.

ಗ್ರಾಮಸ್ಥರು ಊರ ಹೊರವಲಯದಲ್ಲಿರುವ ಬನ್ನಿ ಮರದಲ್ಲಿ ಉತ್ಸವ ಮೂರ್ತಿಗಳೊಂದಿಗೆ ತೆರಳಿ ಬನ್ನಿ ಮುಡಿದರು.

ರಾಂಪುರದಲ್ಲಿ ದುರ್ಗಾದೇವಿ ಹಾಗೂ ವೆಂಕಟೇಶ್ವರ ಸ್ವಾಮಿಯ ಬನ್ನಿ ಮುಡಿಯುವ ಮುನ್ನ ಉತ್ಸವ ಮೂರ್ತಿಗಳೊಂದಿಗೆ ತುಂಗಭದ್ರಾ ನದಿಗೆ ತೆರಳಿ ಗಂಗಾ ಪೊಜೆ ನೆರವೇರಿಸಲಾಯಿತು.

ಒಂಬತ್ತು ದಿನಗಳ ಕಾಲ ಗ್ರಾಮದ ಮಹಿಳೆಯರು, ನವ ದುರ್ಗೆಯರ ವೃತಾಚರಣೆ ಕೈಗೊಂಡು ಮಡಿಯೊಂದಿಗೆ ಅಮ್ಮನ ಗುಡಿಗೆ ಹಾಗೂ ಬನ್ನಿ ಮರಕ್ಕೆ ತೆರಳಿ ಪೂಜೆಯನ್ನು ನೆರವೇರಿಸಿದರು.

ಕಿರಿಯರು ಬನ್ನಿ ಪತ್ರೆಯನ್ನು ಹಿರಿಯರಿಗೆ ನೀಡಿ ಆಶೀರ್ವಾದ ಪಡೆದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು