ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದುವರೆದ ಲೆಕ್ಕಪರಿಶೋಧನೆ: ತನಿಖೆ ಚುರುಕು

Published : 26 ಸೆಪ್ಟೆಂಬರ್ 2024, 16:07 IST
Last Updated : 26 ಸೆಪ್ಟೆಂಬರ್ 2024, 16:07 IST
ಫಾಲೋ ಮಾಡಿ
Comments

ಅಣ್ಣಿಗೇರಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದಲ್ಲಿನ ಧಾನ್ಯ ತುಂಬಿದ ಚೀಲಗಳ ನಾಪತ್ತೆ ಕುರಿತು ಪ್ರಕರಣ ಗುರುವಾರ ಮಧ್ಯಾಹ್ನ ದಾಖಲಾಗುತ್ತಿದ್ದಂತೆಯೇ ತನಿಖೆ  ಚುರುಕುಗೊಂಡಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮಣಿ ಹಾಗೂ ಡಿವೈಎಸ್ಪಿ ಎಸ್.ಎಂ.ನಾಗರಾಜ ಭೇಟಿ ನೀಡಿ ಪ್ರಕರಣ ಕುರಿತು ಮಾಹಿತಿ ಪಡೆದರು.

‘ಉಗ್ರಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಗ್ರಾಣ ವ್ಯವಸ್ಥಾಪಕ ಆಕಾಶ ಮೂಶಣ್ಣವರ ಅವರೇ ಈ ಕೃತ್ಯ ಎಸಗಿ ರೈತರಿಗೆ ವಂಚನೆ ಮಾಡಿದ್ದಾರೆ‘ ಎಂದು ಪ್ರಾದೇಶಿಕ ವ್ಯವಸ್ಥಾಪಕ ನೇಮಪ್ಪ ಲಂಬಾಣಿ ದೂರು ನೀಡಿದ್ದಾರೆ.

ಉಗ್ರಾಣದಲ್ಲಿ ಸಂಗ್ರಹವಾಗಿದ್ದ ಚೀಲಗಳ ಕುರಿತು ಉಗ್ರಾಣ ನಿಗಮದ ಮೇಲಾಧಿಕಾರಿ ಅವರು ಎರಡು ದಿನಗಳಿಂದ ಲೆಕ್ಕಪರಿಶೋಧನೆ ಮಾಡುತ್ತಿದ್ದು, ಗುರುವಾರವೂ ಲೆಕ್ಕಪರಿಶೋಧನೆ  ಮುಂದುವರೆಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.

‘ಅಂದಾಜು ₹1.26 ಕೋಟಿ ಬೆಲೆಬಾಳುವ 3,432 ಕಡಲೆ, 709 ಕ್ವಿಂಟಾಲ್ ಹೆಸರು ಕಾಳು ಚೀಲಗಳು ಸೇರಿದಂತೆ ಒಟ್ಟು 4141 ಚೀಲಗಳು (ಅಂದಾಜು 50 ಕೆಜಿ ತೂಕದ) ಉಗ್ರಾಣದಿಂದ ನಾಪತ್ತೆಯಾಗಿವೆ. ನಾಪತ್ತೆಯಾದ ಚೀಲಗಳ ಮೇಲೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸ್ಥಳೀಯ ರಡ್ಡಿ ಸಹಕಾರಿ ಬ್ಯಾಂಕ್‌ನಲ್ಲಿ ₹43.95 ಲಕ್ಷ ಸಾಲ ಸಹ ಪಡೆದಿರುತ್ತಾನೆ’ ಎಂದು ತಿಳಿದು ಬಂದಿದೆ.

ಲೆಕ್ಕಪರಿಶೋಧಕರಾದ ಶೋಭಾ, ವಿಜಯಲಕ್ಷ್ಮೀ, ಪ್ರಾದೇಶಿಕ ವ್ಯವಸ್ಥಾಪಕ ನೇಮಪ್ಪ ಲಂಬಾಣಿ, ಮಂಜುನಾಥ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ ತ್ವರಿತ ಗತಿಯಲ್ಲಿ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ರೈತ ಮುಖಂಡ ಮಹಾಬಳೇಶ್ವರ ಹೆಬಸೂರ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT