ಗುರುವಾರ , ಆಗಸ್ಟ್ 22, 2019
27 °C

‘ಸೋಷಿಯಲ್‌ ಇಂಪ್ಯಾಕ್ಟ್‌’ ಪ್ರಶಸ್ತಿಗೆ ಅರ್ಜಿ ಆಹ್ವಾನ

Published:
Updated:

ಹುಬ್ಬಳ್ಳಿ: ಬೆಂಗಳೂರು ಮೂಲದ ರೀಚ್‌ ಫಾರ್‌ ಕಾಸ್‌ ಸಂಸ್ಥೆ, ಹುಬ್ಬಳ್ಳಿಯ ಸೃಷ್ಟಿ ಇನ್ಫೋಟೆಕ್‌ ಸಹಯೋಗದಲ್ಲಿ ಸಾಮಾಜಿಕ ಸೇವೆ ಮಾಡುತ್ತಿರುವ ವ್ಯಕ್ತಿ ಹಾಗೂ ಸರ್ಕಾರೇತರ ಸಂಘಗಳಿಂದ ‘ಸೋಷಿಯಲ್‌ ಇಂಪ್ಯಾಕ್ಟ್‌’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೀಚ್‌ ಸಂಸ್ಥೆಯ ಕಾರ್ಯಕ್ರಮ ನಿರ್ದೇಶಕ ಆರ್‌. ಶಿವಕುಮಾರ್‌ ‘ಸಮಾಜದ ಮೇಲೆ ಪರಿಣಾಮ ಬೀರುವಂತ ಕೆಲಸಗಳನ್ನು ಮಾಡಿ ಎಲೆ, ಮರದ ಕಾಯಿಯಂತೆ ಉಳಿದುಕೊಂಡವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗುತ್ತದೆ’ ಎಂದರು.

‘ಧಾರವಾಡ, ಬಾಗಲಕೋಟೆ, ಗದಗ ಮತ್ತು ಬೆಳಗಾವಿ ಜಿಲ್ಲೆಗಳ ಸಾಧಕರು ಆ. 20ರ ಒಳಗೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಆ. 25ರಂದು ಮಧ್ಯಾಹ್ನ 3ಕ್ಕೆ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿ ಜಿಲ್ಲೆಯ ತಲಾ 10 ಸಾಧಕರಿಗೆ ಪ್ರಶಸ್ತಿ ಕೊಡಲಾಗುವುದು’ ಎಂದು ತಿಳಿಸಿದರು.

ರೀಚ್‌ ಫಾರ್‌ ಕಾಸ್‌, 1ನೇ ಮಹಡಿ, 9ನೇ ಕ್ರಾಸ್‌, ಸಿ.ಜೆ. ವೆಂಕಟದಾಸ್ ರೋಡ್‌, ಪದ್ಮನಾಭನಗರ, ಬೆಂಗಳೂರು–50 ಅಥವಾ shilpa.s@reach4cause.com ಈ ಮೇಲ್‌ ಮಾಡಬಹುದು. ಮಾಹಿತಿಗೆ ಮೊ. 6366688844 ಸಂಪರ್ಕಿಸಿ.

ಸೃಷ್ಟಿ ಇನ್ಫೋಟೆಕ್‌ ಸಿಇಒ ಅಶ್ವಿನಿ ಅನ್ವೇಕರ್ ಜನ್ನೂ, ರೀಚ್‌ ಫಾರ್‌ ಕಾಸ್‌ ಸಂಸ್ಥೆಯ ರಾಯಭಾರಿಗಳಾದ ಮಮತಾ ಕಡೇಮನಿ ಹಾಗೂ ಟಿ.ವಿ. ಗಿರಿಧರ ಇದ್ದರು.

Post Comments (+)