ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇನ್ಫೊಸಿಸ್ ಕ್ರಮಕ್ಕೆ ಸ್ವಾಗತ: ಅರವಿಂದ ಬೆಲ್ಲದ

Published 18 ಜೂನ್ 2024, 16:01 IST
Last Updated 18 ಜೂನ್ 2024, 16:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇನ್ಫೊಸಿಸ್ ಸಂಸ್ಥೆಯು ತನ್ನ ಹುಬ್ಬಳ್ಳಿ ಕೇಂದ್ರಕ್ಕೆ‌ ಉದ್ಯೋಗಿಗಳನ್ನು ವರ್ಗಾಯಿಸಲು ಮುಂದಾಗಿರುವ ಕ್ರಮವನ್ನು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಸ್ವಾಗತಿಸಿದ್ದಾರೆ.

‘ಸಂಸ್ಥೆಯು ಈಗ ಹೆಚ್ಚಿನ ಭತ್ಯೆಗಳನ್ನು ಕೊಡುವ ಭರವಸೆಯೊಂದಿಗೆ ತನ್ನ ಉದ್ಯೋಗಿಗಳನ್ನು ಹುಬ್ಬಳ್ಳಿ ಕೇಂದ್ರಕ್ಕೆ‌ ವರ್ಗಾವಣೆ ಮಾಡಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ. ಇದರಿಂದ ಈ‌ ಭಾಗದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಜೊತೆಗೆ ಈ ಭಾಗದ ಅಭಿವೃದ್ಧಿಗೆ ನೆರವಾಗಲಿದೆ. ಇದು ಹುಬ್ಬಳ್ಳಿ ಜನರ ನಿಲುವಿಗೆ ದೊರೆತ ಜಯ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಈ‌ ಭಾಗದಲ್ಲಿ ಉದ್ಯೋಗ ಸೃಷ್ಟಿಸಲಿ ಮತ್ತು ವಹಿವಾಟು ವೃದ್ಧಿಸಲಿ ಎಂಬ ಉದ್ದೇಶದಿಂದ ರೈತರ ಬೆಲೆ‌ ಬಾಳುವ ಭೂಮಿಯನ್ನು ಇನ್ಫೊಸಿಸ್‌ಗೆ ನೀಡಲಾಗಿತ್ತು. ಆದರೆ, ಸಂಸ್ಥೆಯು ಯಾವುದೇ ಚಟುವಟಿಕೆ ಆರಂಭಿಸದೇ ಜನರ‌ ನಿರೀಕ್ಷೆಯನ್ನು ಹುಸಿಯಾಗಿಸಿತ್ತು. ಕ್ಷೇತ್ರದ ಜನಪ್ರತಿನಿಧಿಯಾಗಿ‌ ಆಯ್ಕೆ ಮಾಡಿದ‌ ಜನರ ಹಿತ‌ಕಾಯುವುದು ಮತ್ತು ಕ್ಷೇತ್ರದ ಅಭಿವೃದ್ಧಿ ಕೈಕೊಳ್ಳುವುದು‌ ನನಗಿರುವ ಜವಾಬ್ದಾರಿ. ಆದ್ದರಿಂದ ಈ ವಿಚಾರವಾಗಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT