ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸದೃಢ ಹೃದಯಕ್ಕೆ ವ್ಯಾಯಾಮ’ ಮಾ.3ರಂದು

Published 29 ಫೆಬ್ರುವರಿ 2024, 12:53 IST
Last Updated 29 ಫೆಬ್ರುವರಿ 2024, 12:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಶಾ ಮಧುಮೇಹ  ಸಂಸ್ಥೆಯು ಸತ್ತೂರ ಹಾರ್ಟ್‌ಕೇರ್‌, ಮಜೇಥಿಯಾ ಫೌಂಡೇಷನ್‌, ಕರ್ನಾಟಕ ಜಿಮ್ಖಾನಾ, ಐಎಂಎ ಹಾಗೂ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಸಂಸ್ಥೆಗಳ ಸಹಯೋಗದೊಂದಿಗೆ ‘ಸದೃಢ ಹೃದಯಕ್ಕೆ ವ್ಯಾಯಾಮ’ ಶಿಬಿರವನ್ನು ಇಲ್ಲಿನ ದೇಶಪಾಂಡೆ ನಗರದ ಜಿಮ್ಖಾನಾ ಮೈದಾನದಲ್ಲಿ ಮಾರ್ಚ್‌ 3ರಂದು ಬೆಳಿಗ್ಗೆ 7ರಿಂದ 9ರವರೆಗೆ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಆಶಾ ಡಯಾಬೆಟಿಕ್‌ ಟ್ರಸ್ಟ್‌ ಹಾಗೂ ರಿಸರ್ಚ್‌ ಫೌಂಡೇಷನ್‌ ಕಾರ್ಯದರ್ಶಿ ಡಾ.ಜಿ.ಬಿ. ಸತ್ತೂರ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಅರಿವು ಮೂಡಿಸಲು ಶಿಬಿರ ಹಮ್ಮಿಕೊಳ್ಳಲಾಗಿದೆ. ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು ಹೊರತುಪಡಿಸಿ, ಇನ್ನುಳಿದವರು ಪಾಲ್ಗೊಳ್ಳಬಹುದು. ಯೋಗಾ ಮ್ಯಾಟ್‌ ಜೊತೆಗೆ ಬರಬೇಕು’ ಎಂದು ತಿಳಿಸಿದರು.

ಶಿಬಿರದಲ್ಲಿ ಹೃದಯವನ್ನು ಸದೃಢ ಮಾಡುವ ವ್ಯಾಯಾಮಗಳನ್ನು ಹೇಳಿಕೊಡಲಾಗುವುದು. 36 ಪುಟದ ಮಧುಮೇಹ ಕೈಪಿಡಿಯನ್ನು ಹಾಗೂ ವಾಕಿಂಗ್‌ ಮಾಡುವ ಕುರಿತಾದ ಕರಪತ್ರ ಉಚಿತವಾಗಿ ನೀಡಲಾಗುವುದು. ರಕ್ತದೊತ್ತಡ, ಸಕ್ಕರೆ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

2024 ಹಾಗೂ 2025ರಲ್ಲಿ 1 ಲಕ್ಷಕ್ಕೂ ಹೆಚ್ಚು ಜನರ ರಕ್ತದೊತ್ತಡ, ಸಕ್ಕರೆ ಪರೀಕ್ಷೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮ್ಯಾನೇಜಿಂಗ್‌ ಟ್ರಸ್ಟಿ ಮಹೇಂದ್ರ ವಿಕಮಸಿ, ಟ್ರಸ್ಟಿ ಸದಸ್ಯರಾದ ಕೆವಲ್‌ ಲುಂಕರ, ಜೆ.ಸಿ. ಮಠದ, ವಿ.ಎಸ್‌.ವಿ. ಪ್ರಸಾದ, ಕೇಶವ ದೇಸಾಯಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT