ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೋಳ: ಅಷ್ಟಭುಜ ವೀರಭದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

Published 11 ಏಪ್ರಿಲ್ 2024, 15:30 IST
Last Updated 11 ಏಪ್ರಿಲ್ 2024, 15:30 IST
ಅಕ್ಷರ ಗಾತ್ರ

ಕುಂದಗೋಳ: ತಾಲ್ಲೂಕಿನ ಬೆಟದೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಅಷ್ಟಭುಜ ವೀರಭದೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ.

ಏಪ್ರಿಲ್ 11ರಂದು ಸಂಜೆ ಧರ್ಮಸಭೆ ನಡೆಯಿತು. ಏ. 12ರಂದು ಬೆಳಿಗ್ಗೆ ಕುಂದಗೋಳದ ಶ್ರೀ ವೀರಭದ್ರೇಶ್ವರ ಪುರವಂತರಿಂದ ಗುಗ್ಗಳ ಕಾರ್ಯಕ್ರಮ ಮಧ್ಯಾಹ್ನ ರಥದ ಕಳಸದ ಮೆರವಣಿಗೆ ನಡೆಯಲಿದೆ. ಏ.13ರಂದು ಸಂಜೆ ರಥೋತ್ಸವ,  14 ರಂದು ಕಡಬಿನ ಕಾಳಗ ಜರುಗಲಿದೆ.

ಶಿರಹಟ್ಟಿ ಬಾಲೆಹೊಸೂರ ಪೀಠದ ಪಕೀರ ದಿಂಗಾಲೇಶ್ವರ ಶ್ರೀಗಳು, ನಿಲಗುಂದ ಗುಡ್ಡದ ಸಂಸ್ಥಾನ ಜಂಗಮ ಪೀಠದ ಚನ್ನಬಸವ ಶಿವಯೋಗಿಗಳು, ಕುಂದಗೋಳದ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರು, ಕಲಬುರ್ಗಿ ಜಿಲ್ಲೆಯ ಕೊಳೂರು ಶಿವಲಿಂಗೇಶ್ವರ ಮಠದ ಮೃತ್ಯುಂಜಯ ದೇವರು ಸಾನ್ನಿಧ್ಯ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT