ಭಾನುವಾರ, ಜೂನ್ 13, 2021
21 °C
ರಾಜೀವ್ ಗಾಂಧಿ ಪುಣ್ಯಸ್ಮರಣೆ: ಧಾನ್ಯ ವಿತರಿಸಿ ಆಚರಣೆ

ಆಟೊ ಚಾಲಕರಿಗೆ, ಪುರೋಹಿತರಿಗೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯನ್ನು ಶುಕ್ರವಾರ ನಗರದಲ್ಲಿ ಸರಳವಾಗಿ ಆಚರಿಸಲಾಯಿತು.

ಕೋವಿಡ್‌ ಲಾಕ್‌ಡೌನ್‌ ಇರುವ ಕಾರಣ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಹುಬ್ಬಳ್ಳಿ ಯೂತ್ ಫೌಂಡೇಷನ್‌ ಸಂಯುಕ್ತ ಆಶ್ರಯದಲ್ಲಿ 500 ಆಟೊ ಚಾಲಕರು ಹಾಗೂ ಪುರೋಹಿತರಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳನ್ನು ವಿತರಿಸಲಾಯಿತು.

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಯೂತ್‌ ಫೌಂಡೇಷನ್‌ ಅಧ್ಯಕ್ಷ ಶಹಾಜಮನ್‌ ಮುಜಾಹಿದ್‌, ಜಿಲ್ಲಾ ಅರ್ಚಕರು ಹಾಗೂ ಪುರೋಹಿತರ ಸಂಘದ ಖಜಾಂಚಿ ಮಹಾಂತಯ್ಯ ಹಿರೇಮಠ, ಜಿಲ್ಲಾ ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ್ ಕದಂ, ಲಕ್ಷ್ಮಣ ಹಿರೇಕೆರೂರ ಆಟೊ ಚಾಲಕರ ಸಂಘದ ಅಧ್ಯಕ್ಷ ಹಣಮಂತಪ್ಪ ಪವಡಿ, ದೇಶಪಾಂಡೆ ನಗರದ ಆಟೊ ಚಾಲಕರ ಸಂಘದ ಅಧ್ಯಕ್ಷ ಮಾರುತಿ ಸೊನ್ನದ, ಕಾಂಗ್ರೆಸ್ ಮುಖಂಡರಾದ ಮಂಜು ಉಳ್ಳಾಗಡ್ಡಿ, ಚಂದ್ರಶೇಖರ ಕಲ್ಲೂರ, ಸಮೀರ ಖಾನ್, ಲಕ್ಷ್ಮಣ ಗಡ್ಡಿ, ಮೊಹಮ್ಮದ್ ಹುಸೇನ ಹಾಜಿ, ಸುನಿಲ್ ಮರಾಟೆ ಇದ್ದರು.

ಸ್ಮರಣೆ: ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಆಚರಣೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹುಸೇನ್ ಹಳ್ಳೂರ ಮಾತನಾಡಿ ‘ದೇಶಕ್ಕೆ ರಾಜೀವ್ ಗಾಂಧಿ ಅವರ ಕೊಡುಗೆ ಅನನ್ಯ. ಅವರಂತ ದೂರದೃಷ್ಟಿ ನಾಯಕನ ಕೊರತೆ ಈಗ ಕಾಡುತ್ತಿದೆ’ ಎಂದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ದಶರಥ ವಾಲಿ ಇದ್ದರು.

ಯುವ ಕಾಂಗ್ರೆಸ್‌ ಸಮಿತಿ: ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಇಮ್ರಾನ್‌ ಯಲಿಗಾರ, ಪ್ರಮುಖರಾದ ಸ್ವಾತಿ ಮಾಳಗಿ, ಅಬ್ದುಲ್ ದೇಸಾಯಿ, ಪ್ರವೀಣ ಶಲವಡಿ, ಅಬು ಬಿಜಾಪೂರ, ಅರ್ಬಾಸ್ ಮನಿಯಾರ, ಸಂತೋಷ ನಾಯಕ, ಖಾಸೀಂ ಕುಡಲಗಿ, ಶಿವು ಗೋಕಾವಿ, ವಿನಯ ನಾವಳ್ಳಿ, ಮೈಲಾರಿ ಹೊಸಮನಿ, ಅತೀತ ಕಮ್ಮಾರ, ಫಯಾಜ್ ಮುದಗಲ್ಲ, ಶೌಕತ್ ಅಲಿ ಶೇಖ, ಇಮ್ರಾನ ಮುಧೋಳ, ಸದಾನಂದ ಕುಲಕರ್ಣಿ, ಮನಿಕಂಠ ಗುಡಿಹಾಳ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು