ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ–ಶೆಡಬಾಳ ರೈಲು ಇಂದಿನಿಂದ

Last Updated 9 ಏಪ್ರಿಲ್ 2021, 16:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಏ. 10 (ಶನಿವಾರದಿಂದ) ಬೆಳಗಾವಿ–ಶೆಡಬಾಳ ಮಾರ್ಗದಲ್ಲಿ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್‌ನ ರೈಲಿನ ಸಂಚಾರ ಆರಂಭಿಸಲಿದೆ. ಇದಕ್ಕೆ ಸಾಮಾನ್ಯ ದರ ಇರಲಿದೆ.

ಬೆಳಿಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಟು 11.15ಕ್ಕೆ ಶೆಡಬಾಳ ಮುಟ್ಟಲಿದೆ. ಶೆಡಬಾಳದಿಂದ ಮಧ್ಯಾಹ್ನ 12 ಗಂಟೆಗೆ ಹೊರಡಲಿದ್ದು, ಮ. 3.15ಕ್ಕೆ ಬೆಳಗಾವಿ ತಲುಪಲಿದೆ.

ಏ. 13ರಿಂದ ಬೆಳಗಾವಿ–ಶೆಡಬಾಳ ನಡುವೆ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್‌ನ ಇನ್ನೊಂದು ರೈಲು ಸಂಚರಿಸಲಿದೆ. ಬೆಳಗಾವಿಯಿಂದ ಬೆಳಗಿನ ಜಾವ 4 ಗಂಟೆಗೆ ಹೊರಡುವ ರೈಲು 6.35ಕ್ಕೆ ಶೆಡಬಾಳ ತಲುಪಲಿದೆ. ಗೋಕಾಕ್‌ ರೋಡ್‌, ಘಟಪ್ರಭಾ, ಚಿಕ್ಕೋಡಿ, ರಾಯಬಾಗ, ಕುಡಚಿ ಮತ್ತು ಉಗಾರ್‌ ಖುರ್ದ್‌ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಇದೇ ರೈಲು ಏ. 12ರಿಂದ ಸಂಜೆ 5.30ಕ್ಕೆ ಶೆಡಬಾಳದಿಂದ ಹೊರಟು ರಾತ್ರಿ 8.45ಕ್ಕೆ ಕುಂದಾನಗರಿಗೆ ಬರಲಿದೆ.

ಹುಬ್ಬಳ್ಳಿ–ಶೆಡಬಾಳ ರೈಲು: ಏ. 12ರಿಂದ ಹುಬ್ಬಳ್ಳಿ–ಶೆಡಬಾಳ ನಡುವೆ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್‌ನ ರೈಲಿನ ಸಂಚಾರ ಆರಂಭವಾಗಲಿದೆ.

ಅಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಜೆ 5 ಗಂಟೆಗೆ ಶೆಡಬಾಳ ತಲುಪಲಿದೆ. ನವಲೂರು, ಧಾರವಾಡ, ಮುಗುದ, ಅಳ್ನಾವರ, ತಾವರಗಟ್ಟಿ, ದೇವರಾಯಿ, ಲೋಂಡಾ, ಗುಂಜಿ, ಖಾನಾಪುರ, ದೇಸೂರು, ಬೆಳಗಾವಿ, ಸುಳೇಬಾವಿ, ಸುಲದಾಳ, ಪಾಶ್ಚಾಪುರ, ಪರಕನಹಟ್ಟಿ, ಗೋಕಾಕ ರೋಡ್‌, ಘಟಪ್ರಭಾ, ಬಾಗೇವಾಡಿ, ಚಿಕ್ಕೋಡಿ ರೋಡ್‌, ರಾಯಬಾಗ, ಚಿಂಚಲಿ, ಕುಡಚಿ ಮತ್ತು ಉಗಾರ್‌ ಖುರ್ದ್‌ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಏ. 13ರಿಂದ ಶೆಡಬಾಳದಿಂದ ಬೆಳಿಗ್ಗೆ 7.30ಕ್ಕೆ ಹೊರಡುವ ರೈಲು ಮಧ್ಯಾಹ್ನ 2 ಗಂಟೆಗೆ ವಾಣಿಜ್ಯ ನಗರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT