ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟಿಷರ ಕಾಲದ ಚಿಮಣಿ ನೆಲಕ್ಕೆ

Last Updated 25 ಜನವರಿ 2023, 9:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಗಿರಣಿಚಾಳದ ಬಳಿಯ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದ ಜಿನ್ನಿಂಗ್ ಫ್ಯಾಕ್ಟರಿಯ ಚಿಮಣಿಯನ್ನು (ಬೋಂಗಾ) ಬುಧವಾರ ನೆಲಕ್ಕುರಳಿಸಲಾಯಿತು.

ಬ್ರಿಟಿಷರು 1865ರಲ್ಲಿ ಹದಿನಾರು ಎಕರೆಯ‌ ಈ ಜಾಗದಲ್ಲಿ ಸದರನ್ ಮರಾಠ ಸ್ಪಿನ್ನಿಂಗ್ ಆ್ಯಂಡ್ ವೇವಿಂಗ್ ಕಂಪನಿ ಹೆಸರಲ್ಲಿ ಸ್ಥಾಪಿಸಿದ್ದರು. ಅದೇ ಮುಂದೆ, ಭಾರತ್ ಮಿಲ್ ಹಾಗೂ ಮಹಾದೇವ ಟೆಕ್ಸಟೈಲ್ ಮಿಲ್ ಎಂದೇ ಹೆಸರಾಗಿತ್ತು.

ಮಿಲ್ ಬಂದ್ ಆದ ಬಳಿಕ, ಈ ಸ್ಥಳ ಪಾಳು ಬಿದ್ದಿತ್ತು. ಇತ್ತೀಚಿಗೆ ಖಾಸಗಿಯವರು ಖರೀದಿಸಿದ್ದರು. ಸ್ಥಳದಲ್ಲಿದ್ದ ಮಿಲ್‌ ನ ಕುರುಹಾಗಿ ಉಳಿದಿದ್ದ ಚಿಮಣಿಯನ್ನು ಇಂದು‌ ಕೆಡವಲಾಯಿತು ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT