ಚಳಿಗಾಲದಲ್ಲಿ ಬ್ರಾಯ್ಲರ್ ಕೋಳಿ ದರ ದುಬಾರಿಯಾಗಿದ್ದು ಇದೇ ಮೊದಲು. ಒಂದು ಕೆ.ಜಿ ಮಾಂಸ ಖರೀದಿಸುತ್ತಿದ್ದ ಗ್ರಾಹಕರು ಈಗ ಅರ್ಧ ಕೆ.ಜಿ. ಖರೀದಿಸುತ್ತಿದ್ದಾರೆ.
–ಹರೀಶ್ ಕುಮಾರ್, ಮ್ಯಾಕ್ಸ್ ಫ್ರೆಶ್ ಮೀಟ್, ತುಮಕೂರು
ಸ್ಥಳೀಯ ಮಟ್ಟದಲ್ಲಿ ಪೌಲ್ಟ್ರಿ ಫಾರ್ಮ್‌ಗಳ ಸಂಖ್ಯೆ ಕುಸಿದಿದೆ. ಹೀಗಾಗಿ ಮೊಟ್ಟೆಗಳನ್ನು ಮರಿಯಾಗಿಸುವ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ದೊಡ್ಡ ಕಂಪನಿಯವರು ಕೇಳಿದಷ್ಟೇ ದರ ಕೊಟ್ಟು ಕೋಳಿ ಖರೀದಿಸಬೇಕಿದೆ.