ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧನ್ವ ಶತಕ; ಸಿಸಿಕೆ ಶುಭಾರಂಭ

ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್‌: ಹುಬ್ಬಳ್ಳಿ ಸ್ಪೋರ್ಟ್ಸ್‌ ತಂಡಕ್ಕೆ ಜಯ
Published : 9 ಸೆಪ್ಟೆಂಬರ್ 2018, 18:53 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಸುಧನ್ವ ಕುಲಕರ್ಣಿ ಗಳಿಸಿದ ಅಜೇಯ ಶತಕ ಮತ್ತು ರಾಹುಲ್‌ ವರ್ಣೇಕರ್‌ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ (ಸಿಸಿಕೆ) ‘ಎ’ ತಂಡ ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 265 ರನ್‌ ಗಳಿಸಿತು. ಸಿಸಿಕೆ ಕ್ಲಬ್‌ 47.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಬಿ.ಎನ್‌. ನಿನಾದ್‌ 60 ರನ್‌ ಗಳಿಸಿ ಗೆಲುವಿಗೆ ಕಾಣಿಕೆ ನೀಡಿದರು.

ಟೂರ್ನಿಗೆ ಚಾಲನೆ: ಎಸಿಪಿ ಪಠಾಣ್‌ ಅವರು ಭಾನುವಾರ ರಾಜನಗರದ ಕ್ರೀಡಾಂಗಣದಲ್ಲಿ ಟೂರ್ನಿಗೆ ಚಾಲನೆ ನೀಡಿದರು.

ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಬಾಬಾ ಭೂಸದ, ಟೂರ್ನಿ ಸಮಿತಿಯ ಮುಖ್ಯಸ್ಥ ಅಲ್ತಾಫ್‌ ಕಿತ್ತೂರು, ಅಧ್ಯಕ್ಷ ವೀರಣ್ಣ ಸವದಿ, ವಸಂತ ಮುರ್ಡೇಶ್ವರ, ಜಯರಾಜ್ ನೂಲ್ವಿ, ವಿನಾಯಕ ಗುಡಿ ಇದ್ದರು.

ಸಂಕ್ಷಿಪ್ತ ಸ್ಕೋರು: ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ‘ಎ’ ತಂಡ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 265 (ಪಿ.ಎಲ್‌. ಕೌಸ್ತುಬ್‌ 73, ಪರೀಕ್ಷಿತ್‌ ಶೆಟ್ಟಿ 77, ಶಿವಯೋಗಿ ಮುದಿಗೌಡರ 20, ವೆಂಕಟೇಶ ನಾಗಪುರ 39; ಸುಮೇದ್‌ ಹಲಸಗಿ 48ಕ್ಕೆ3, ಎಸ್‌. ಅರುಣ 47ಕ್ಕೆ1, ಶಬ್ಬೀರ್‌ ಮುಲ್ಲಾ 27ಕ್ಕೆ1, ಸುಧನ್ವ ಕುಲಕರ್ಣಿ 59ಕ್ಕೆ1). ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ ‘ಎ’ 47.4 ಓವರ್‌ಗಳಲ್ಲಿ 2 ವಿಕೆಟ್‌ಗೆ 269 (ಬಿ.ಎನ್‌. ನಿನಾದ್‌ 60, ಸುಧನ್ವ ಕುಲಕರ್ಣಿ ಅಜೇಯ 100, ರಾಹುಲ್‌ ವರ್ಣೇಕರ ಅಜೇಯ 79; ಎನ್‌. ಸೋಮೇಶ್ವರ 40ಕ್ಕೆ2). ಫಲಿತಾಂಶ: ಸಿಸಿಕೆ ಕ್ಲಬ್‌ಗೆ 8 ವಿಕೆಟ್‌ ಜಯ ಹಾಗೂ ನಾಲ್ಕು ಪಾಯಿಂಟ್ಸ್‌.

ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ‘ಎ’ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 303 (ವಿಠ್ಠಲ್‌ ಹಬೀಬ್‌ 23, ಎ.ಸಿ. ರೋಹಿತ್‌ 47, ಸರ್ಫರಾಜ್‌ ಅಲ್ಲಬಾದ್‌ 29, ಪ್ರಣವ್‌ ಭಾಟಿಯಾ ಔಟಾಗದೆ 87, ಎಸ್‌.ಎ. ಸಾಗರ 71; ಆರ್‌. ದೀಪಕ್ 80ಕ್ಕೆ3, ಬಿ. ಅಮೇಯ್ 44ಕ್ಕೆ3, ಬಿ. ರುತುರಾಜ್‌ 31ಕ್ಕೆ1). ಯೂನಿಯನ್‌ ಜಿಮ್ಖಾನಾ 47.3 ಓವರ್‌ಗಳಲ್ಲಿ 248 (ವೈಷ್ಣವ ಸಂಗಮತಿ 49, ಶಿವಪ್ರಕಾಶ ಹಿರೇಮಠ 27, ಮಜೀದ್‌ ಮಕಂದರ್ 41, ರುತುರಾಜ್‌ ಭಾಟೆ 32, ಅಮೇಯ ಭಟಕಂಡೆ 53, ದೀಪಕ್‌ ರಾಕೇಶ 29; ಎಸ್‌.ಎ. ಸಾಗರ 28ಕ್ಕೆ1, ಪ್ರಣವ ಭಾಟಿಯಾ 29ಕ್ಕೆ2, ವಿಠ್ಠಲ್‌ ಹಬೀಬ್‌ 65ಕ್ಕೆ2, ಎ.ಸಿ. ರೋಹಿತ್‌ 43ಕ್ಕೆ4). ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ಗೆ 55 ರನ್‌ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT