ಸೋಮವಾರ, ಜನವರಿ 27, 2020
15 °C
ಸಿಎಎ, ಎನ್‌ಆರ್‌ಸಿ ಜಾರಿಗೆ ವಿರೋಧ

ಸಿಎಎ, ಎನ್‌ಆರ್‌ಸಿ ಕಾಯ್ದೆ ಹಿಂಪಡೆಯಲು ಕೈ ಕಾರ್ಯಕರ್ತೆಯರಿಂದ ಗುಲಾಬಿ ನೀಡಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಕಾರ್ಯಕರ್ತೆಯರು ಗುರುವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಗೆ ತೆರಳಿ ಅವರ ಅನುಪಸ್ಥಿತಿಯಲ್ಲಿ ಅವರ ಆಪ್ತ ಕಾರ್ಯದರ್ಶಿ ಚಂದ್ರಶೇಖರಗೆ ಗುಲಾಬಿ ಹೂಗಳನ್ನು ನೀಡುವ ಮೂಲಕ ಸಿಎಎ, ಎನ್‌ಆರ್‌ಸಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು. ಸಚಿವರಿಗೆ ಹೊಸ ವರ್ಷದ ಶುಭಾಷಯ ತಿಳಿಸುವಂತೆ ಕೋರಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದೀಪಾ ಗೌರಿ ಮಾತನಾಡಿ, ಸಂವಿಧಾನ ವಿರೋಧಿಯಾಗಿರುವ ಸಿಎಎ, ಎನ್‌ಆರ್‌ಸಿ ಕಾಯ್ದೆ ಜಾರಿಯಾಗದಂತೆ ಸಚಿವ ಪ್ರಹ್ಲಾದ ಜೋಶಿ ಅವರು ಸಂಸತ್ತಿನಲ್ಲಿ ದ್ವನಿ ಎತ್ತಬೇಕು ಎಂದು ಮನವಿ ಮಾಡಿದರು.

ಧಾರವಾಡ ರಾಣಿ ಚನ್ನಮ್ಮ ಬ್ಲಾಕ್‌ ಅಧ್ಯಕ್ಷೆ ಗೌರಿ ನಾಡಗೌಡ, ಮಹಿಳಾ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ದೊಡ್ಡಮನಿ, ರತ್ನಾ ತೇಗೂರಮಠ, ವಿಶಾಲ ಗುಡಿಹಾಳ, ಬಾಳಮ್ಮ ಜಂಗೀನವರ, ಜಗದೇವಿ ಚಿಂಚೋಳಿ, ಚೇತನ ಲಿಂಗದಾಳ, ಚಾಂಬ್‌ಬೀ ಅತ್ತಾರ್‌, ಸುನೀತಾ ಘಾಟಗಿ, ಸಂಜನಾ ಸಿಂಗನಹಳ್ಳಿ, ವಂದನಾ ಮೇಜವಾಡ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು