ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನವ ತಂತ್ರಜ್ಞಾನ; ಅಂತರ್‌ಶಿಸ್ತೀಯ ಅಧ್ಯಯನ ಪೂರಕ’

Published : 30 ಜುಲೈ 2023, 15:49 IST
Last Updated : 30 ಜುಲೈ 2023, 15:49 IST
ಫಾಲೋ ಮಾಡಿ
Comments

ಧಾರವಾಡ: ‘ಯೋಜನೆ ತಯಾರಿ, ವಿನ್ಯಾಸ, ಅಭಿವೃದ್ಧಿ, ಅನುಷ್ಠಾನ ಇವು ಎಂಜಿನಿಯರ್‌ ವೃತ್ತಿಯ ಪ್ರಮುಖ ಕಾರ್ಯಗಳು. ಇವೆಲ್ಲವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದಾಗ ಗುರಿ ಸಾಧಿಸಲು ಸಾಧ್ಯ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪ್ರೊ.ಅನುರಾಗ್‌ ಕುಮಾರ್‌ ಹೇಳಿದರು.

ನಗರದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ಸಭಾಂಗಣದಲ್ಲಿ ಭಾನುವಾರ ನಡೆದ ಐದನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಕೈಗಾರಿಕೆ ಮತ್ತು ವ್ಯವಹಾರ ಕ್ಷೇತ್ರದಲ್ಲಿ ನವ ತಂತ್ರಜ್ಞಾನ, ನವೀನ ಉತ್ಪನ್ನಗಳು, ಸೇವೆಗಳು ಪ್ರಮುಖ ಪಾತ್ರ ವಾಹಿಸುತ್ತವೆ. ನವ ತಂತ್ರಜ್ಞಾನಗಳ ಅನ್ವೇಷಣೆ ನಿಟ್ಟಿನಲ್ಲಿ ಸಂಶೋಧನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಅನ್ವಯಿಕ ಮತ್ತು ಹೊಸ ತಂತ್ರಜ್ಞಾನಗಳ ಸಂಶೋಧನೆ ನಿಟ್ಟಿನಲ್ಲಿ ಅಂತರ್‌ಶಿಸ್ತೀಯ ಅಧ್ಯಯನ ಮುಖ್ಯ ಪಾತ್ರವಹಿಸುತ್ತದೆ. ಇದು ಹೊಸ ಉಪಕರಣಗಳ ಸಂಶೋಧನೆ, ಉದ್ಯಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.

ಮಾಹಿತಿ ತಂತ್ರಜ್ಞಾನವು (ಐಟಿ) ಗಣಿತ, ಭೌತ ವಿಜ್ಞಾನ, ಎಲೆಕ್ಟ್ರಿಕಲ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮೊದಲಾದ ಅಧ್ಯಯನ ಕ್ಷೇತ್ರಗಳನ್ನು ಒಳಗೊಂಡಿದೆ. ಐಟಿ ಕ್ಷೇತ್ರದ ದೊಡ್ಡ ಸಂಸ್ಥೆಗಳು ಬೃಹತ್‌ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತವೆ. ತರುಣ ಎಂಜಿನಿಯರ್‌ಗಳು ಇಂಥ ಯೋಜನೆಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೈದರಾಬಾದ್‌ನ ಐಐಐಟಿ ಮಾಜಿ ನಿರ್ದೇಶಕ ಪ್ರೊ.ಯು.ಬಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಐಐಐಟಿ ಕುಲಸಚಿವ ಪ್ರೊ.ಸಿ.ಬಿ.ಅಕ್ಕಿ, ಪರೀಕ್ಷಾಂಗ ವಿಭಾಗದ ಸಂಯೋಜಕ ಪ್ರೊ.ಜಗದೀಶ್‌ ಭಟ್‌, ಸೆನೆಟ್‌ ಸದಸ್ಯ ಪ್ರೊ.ಎಚ್‌.ಎಸ್‌.ಜಮದಗ್ನಿ ಇದ್ದರು.

ಧಾರವಾಡದ ಐಐಐಟಿಯಲ್ಲಿ ಭಾನುವಾರ ಏರ್ಪಡಿಸಿದ್ದ ಘಟಿಕೋತ್ಸವದಲ್ಲಿ ಬಿ.ಟೆಕ್‌ ಕೋರ್ಸ್‌ನಲ್ಲಿ ಕುಪ್ಪ ವೆಂಕಟ ಕೃಷ್ಣ ಪಾಂಚಜನ್ಯ ಅಭಿಷೇಕ್‌ ಸಿಂಗ್‌ ಕುಶ್ವಾಹ ಸಂದ ನಿಹಾರ್‌ ಪುರುಷೋತ್ತಮ ಕಶಾ ಸಿಂಗ್‌ ಅವರು ಚಿನ್ನದ ಪದಕ ಪಡೆದರು –ಪ್ರಜಾವಾಣಿ ಚಿತ್ರ
ಧಾರವಾಡದ ಐಐಐಟಿಯಲ್ಲಿ ಭಾನುವಾರ ಏರ್ಪಡಿಸಿದ್ದ ಘಟಿಕೋತ್ಸವದಲ್ಲಿ ಬಿ.ಟೆಕ್‌ ಕೋರ್ಸ್‌ನಲ್ಲಿ ಕುಪ್ಪ ವೆಂಕಟ ಕೃಷ್ಣ ಪಾಂಚಜನ್ಯ ಅಭಿಷೇಕ್‌ ಸಿಂಗ್‌ ಕುಶ್ವಾಹ ಸಂದ ನಿಹಾರ್‌ ಪುರುಷೋತ್ತಮ ಕಶಾ ಸಿಂಗ್‌ ಅವರು ಚಿನ್ನದ ಪದಕ ಪಡೆದರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT